BlogLatestTop Storiesಬೆಂಗಳೂರು-Bengaluru

ಹ್ಯಾಂಡ್ ಬ್ರೇಕ್ ಹಾಕದೆ ನಿಲ್ಲಿಸಿದ್ದ ಟಿಪ್ಪರ್ ಲಾರಿ ಹರಿದು ಮಗು ಸೇರಿ ಇಬ್ಬರ ಸಾವು

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಟಿಪ್ಪರ್ ಹರಿದು ಮಗು ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿನ ಹೊಸ ಗುಡ್ಡದಹಳ್ಳಿಯಲ್ಲಿ ದುರ್ಘಟನೆ ನಡೆದಿದೆ. ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಹರಿದ ಪರಿಣಾಮ ಮಗು ಹಾಗೂ ವ್ಯಕ್ತಿಯೊಬ್ಬರು (14 ವರ್ಷದ ಬಾಲಕ, 21ವರ್ಷದ ಯುವಕ ಸಾವು.) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಾಲೋಬ್ಲಾಕ್ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಚಾಲಕ ರಸ್ತೆಬದಿ ನಿಲ್ಲಿಸಿ ಹೋಗಿದ್ದ. ನಿಲ್ಲಿಸುವಾಗ ಹ್ಯಾಂಡ್ ಬ್ರೇಕ್ ಹಾಕಿರಲಿಲ್ಲ. ಏಕಾಏಕಿ ಚಲಿಸಿದ ಟಿಪ್ಪರ್ ಲಾರಿ ರಸ್ತೆಬದಿ ನಡೆದು ಹೋಗುತ್ತಿದ್ದ ಮಗು ಹಾಗೂ ವ್ಯಕ್ತಿ ಮೇಲೆ ಹರಿದಿದೆ. ಮಗು ಲಾರಿಯ ಚಕ್ರಕ್ಕೆ ಸಿಲುಕಿ ದೇಹ ಛಿದ್ರವಾಗಿದ್ದು ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ವೇಳೆ ಟಿಪ್ಪರ್ ಲಾರಿ 8 ಬೈಕ್ ಗಳು ಮತ್ತು ಎರಡು ಕಾರುಗಳಿಗೆ ಗುದ್ದಿದ್ದು ವಾಹನಗಳು ಜಖಂಗೊಂಡಿವೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

Share with Friends
author avatar
News Desk