EntertainmentLatestTop Storiesಸ್ಯಾಂಡಲ್​ವುಡ್-Sandalwood

ಟಾಕ್ಸಿಕ್ ಚಿತ್ರದ ಬಗ್ಗೆ ಕಿಚ್ಚನ ಮೆಚ್ಚುಗೆಯ ಮಾತು..

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಇತ್ತೀಚಿಗಷ್ಟೇ ಬಿಡುಗಡೆಯಾಗಿ ಜನರ ನೆಚ್ಚಿನ ಚಿತ್ರವಾಗಿದೆ.ಒಳ್ಳೆಯ ಅಭಿಪ್ರಾಯ ಹೊಂದಿರುವ ಈ ಚಿತ್ರದ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಸಿದ್ದಾರೆ.

ಯಶ್ ನಿಮ್ಮ ಹಿಂದಿನ ಕಮರ್ಷಿಯಲ್ ಬ್ಲಾಕ್‌ಬಸ್ಟರ್‌ನ ಯಶಸ್ಸಿನ ಹಾದಿಯ ಸಿದ್ಧಸೂತ್ರವನ್ನ ಬ್ರೇಕ್ ಮಾಡಿದ್ದೀರಿ. ಅದೇ ರೀತಿಯ ಮತ್ತೊಂದು ಸಾಮಾನ್ಯ, ನಿರೀಕ್ಷಿತ ಹಾಗೂ ಫಾರ್ಮುಲಾ ಸಿನಿಮಾವನ್ನು ಮಾಡುವ ಬದಲು, ನೀವು ನಿಜವಾಗಿಯೂ ವಿಭಿನ್ನವಾದ, ಹೊಸ ರೀತಿಯ ಪ್ರಯತ್ನಕ್ಕೆ ಕೈ ಹಾಕಿದ್ದೀರಿ. ಇಂತಹ ವಿಭಿನ್ನ ಕಥಾಹಂದರವನ್ನು ಕೈಗೆತ್ತಿಕೊಳ್ಳಲು ವಿಶೇಷ ಮನಸ್ಥಿತಿ, ಬದ್ಧತೆ ಮತ್ತು ಅಪಾರ ಧೈರ್ಯ ಬೇಕು ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ.

ಟಾಕ್ಸಿಕ್ ಒಂದು ಶ್ಲಾಘನೀಯ ಪ್ರಯತ್ನ. ಇದರಲ್ಲಿ ಕುತೂಹಲ ಕೆರಳಿಸುವ, ಆರೋಗ್ಯಕರ ಚರ್ಚೆ ಹಾಗೂ ಕಲಿಕೆಯ ಅವಕಾಶ ಮಾಡಿಕೊಡುವ ಹಲವು ಅಂಶಗಳಿವೆ. ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬಂದು, ವಿಭಿನ್ನವಾಗಿ ಪ್ರಯೋಗ ಮಾಡುವ ಧೈರ್ಯ ತೋರಿದ್ದಕ್ಕೆ ನಿಮಗೆ ಅಭಿನಂದನೆಗಳು. ಸ್ನೇಹಿತ.. ನಿಮ್ಮ ಮುಂದಿನ ಹಾದಿಗೆ ಪ್ರೀತಿ ತುಂಬಿದ ಶುಭ ಹಾರೈಕೆಗಳು ಎಂದು ಬರೆದುಕೊಂಡಿದ್ದಾರೆ.ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಇತ್ತೀಚಿಗಷ್ಟೇ ಬಿಡುಗಡೆಯಾಗಿ ಜನರ ನೆಚ್ಚಿನ ಚಿತ್ರವಾಗಿದೆ.ಒಳ್ಳೆಯ ಅಭಿಪ್ರಾಯ ಹೊಂದಿರುವ ಈ ಚಿತ್ರದ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಸಿದ್ದಾರೆ.

ಯಶ್ ನಿಮ್ಮ ಹಿಂದಿನ ಕಮರ್ಷಿಯಲ್ ಬ್ಲಾಕ್‌ಬಸ್ಟರ್‌ನ ಯಶಸ್ಸಿನ ಹಾದಿಯ ಸಿದ್ಧಸೂತ್ರವನ್ನ ಬ್ರೇಕ್ ಮಾಡಿದ್ದೀರಿ. ಅದೇ ರೀತಿಯ ಮತ್ತೊಂದು ಸಾಮಾನ್ಯ, ನಿರೀಕ್ಷಿತ ಹಾಗೂ ಫಾರ್ಮುಲಾ ಸಿನಿಮಾವನ್ನು ಮಾಡುವ ಬದಲು, ನೀವು ನಿಜವಾಗಿಯೂ ವಿಭಿನ್ನವಾದ, ಹೊಸ ರೀತಿಯ ಪ್ರಯತ್ನಕ್ಕೆ ಕೈ ಹಾಕಿದ್ದೀರಿ. ಇಂತಹ ವಿಭಿನ್ನ ಕಥಾಹಂದರವನ್ನು ಕೈಗೆತ್ತಿಕೊಳ್ಳಲು ವಿಶೇಷ ಮನಸ್ಥಿತಿ, ಬದ್ಧತೆ ಮತ್ತು ಅಪಾರ ಧೈರ್ಯ ಬೇಕು ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ.

ಟಾಕ್ಸಿಕ್ ಒಂದು ಶ್ಲಾಘನೀಯ ಪ್ರಯತ್ನ. ಇದರಲ್ಲಿ ಕುತೂಹಲ ಕೆರಳಿಸುವ, ಆರೋಗ್ಯಕರ ಚರ್ಚೆ ಹಾಗೂ ಕಲಿಕೆಯ ಅವಕಾಶ ಮಾಡಿಕೊಡುವ ಹಲವು ಅಂಶಗಳಿವೆ. ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬಂದು, ವಿಭಿನ್ನವಾಗಿ ಪ್ರಯೋಗ ಮಾಡುವ ಧೈರ್ಯ ತೋರಿದ್ದಕ್ಕೆ ನಿಮಗೆ ಅಭಿನಂದನೆಗಳು. ಸ್ನೇಹಿತ.. ನಿಮ್ಮ ಮುಂದಿನ ಹಾದಿಗೆ ಪ್ರೀತಿ ತುಂಬಿದ ಶುಭ ಹಾರೈಕೆಗಳು ಎಂದು ಬರೆದುಕೊಂಡಿದ್ದಾರೆ.

Share with Friends
author avatar
Digital Desk