LatestTop Storiesಬೆಂಗಳೂರು-Bengaluru

ವೈರಲ್ ರೀಲ್ಸ್‌ ಬೆನ್ನಲ್ಲೇ: ಆರೋಪಿಗೆ ಪೊಲೀಸ್ ಶಾಕ್!

ಬೆಂಗಳೂರು.ಅ.15- ಮಾರಕಾಸ್ತ್ರಗಳನ್ನು ಹಿಡಿದು ರೀಲ್ಸ್ ಮಾಡಿದ್ದ ಆರೋಪದ ಮೇರೆಗೆ ಯುವಕನೊಬ್ಬನನ್ನು ಸಿಸಿಬಿಯ ಸಂಘಟಿತ ದಳದ ಪೊಲೀಸರು ಬಂಧಿಸಿದ್ದಾರೆ.

ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಸಲ್ಮಾನ್ ಖಾನ್ ಬಂಧಿತ ಆರೋಪಿ. ಬಂಧನದ ವೇಳೆ ಆರೋಪಿಯ ಬೈಕ್‌ನಲ್ಲಿದ್ದ ಎರಡು ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಕುಂಬಳಗೋಡು ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿ ಮಾರಕಾಸ್ತ್ರಗಳನ್ನು ಹೊಂದಿದ್ದ ಉದ್ದೇಶ ಹಾಗೂ ಪ್ರಕರಣದ ಇತರ ವಿವರಗಳ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

Share with Friends
author avatar
Digital Desk