
ಹಾಸ್ಯನಟ ಚಿಕ್ಕಣ್ಣ ದಾಂಪತ್ಯ ಜೀವನಕ್ಕೆ ಎಂಟ್ರಿ – ಮೈಸೂರಿನಲ್ಲಿ ಅದ್ದೂರಿ ಮದುವೆ ಸಂಭ್ರಮ
ಮೈಸೂರು: ಸ್ಯಾಂಡಲ್‌ವುಡ್‌ನ ಮೆಚ್ಚಿನ ಹಾಸ್ಯ ನಟ ಚಿಕ್ಕಣ್ಣ ಅವರು ಕೊನೆಗೂ ಬ್ಯಾಚುಲರ್ ಲೈಫ್‌ಗೆ ಗುಡ್‌ಬೈ ಹೇಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ‘ಕಾಮಿಡಿ ಕಿಲಾಡಿ’ ಎಂದೇ ಖ್ಯಾತರಾಗಿರುವ ಚಿಕ್ಕಣ್ಣ ಮದುವೆ ಸುದ್ದಿ ಕಳೆದ ಹಲವು ದಿನಗಳಿಂದ ಸದ್ದು ಮಾಡುತ್ತಿತ್ತು. ಇದೀಗ ಆ ಸಂಭ್ರಮಕ್ಕೆ ತೆರೆ ಬಿದ್ದಿದೆ.ಚಿಕ್ಕಣ್ಣ ಮತ್ತು ಪಾವನಾ ಅವರ ಮದುವೆ ಸಂಭ್ರಮ ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಸೆಂಟರ್{Spectra Convention Center} ನಲ್ಲಿ ನೆರವೇರಿದೆ.
ಆಗಸ್ಟ್ 29, ಶನಿವಾರ ಸಂಜೆ ಅದ್ದೂರಿ ಆರತಕ್ಷತೆ,ಆಗಸ್ಟ್ 30, ಭಾನುವಾರ ಬೆಳಗ್ಗೆ ಶಾಸ್ತ್ರೋಕ್ತವಾಗಿ ಮುಹೂರ್ತ ನೆರವೇರಿದೆ.ಟ್ರಾಫಿಕ್ ಜಾಮ್ ಆಗುವಷ್ಟು ಅಭಿಮಾನಿಗಳು, ಸಿನಿ ಗಣ್ಯರು ಈ ಮದುವೆಗೆ ಸಾಕ್ಷಿಯಾಗಿದ್ದಾರೆ.ಚಿಕ್ಕಣ್ಣ ಅವರ ಬಾಳ ಸಂಗಾತಿ ಪಾವನಾ ಅವರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದವರು.
ಇದು ಸಂಪೂರ್ಣ ಅರೇಂಜ್ಡ್ ಮ್ಯಾರೇಜ್. ಪಾವನಾ ಅವರು ವೃತ್ತಿಯಲ್ಲಿ ಉದ್ಯಮಿ. ಪರಿಸರ ಸ್ನೇಹಿ ಬಯೋಡಿಗ್ರೇಡಬಲ್ ಮೆಟೀರಿಯಲ್ ತಯಾರಿಸುವ ಕಂಪನಿ ನಡೆಸುತ್ತಿದ್ದಾರೆ ಎಂದು ಚಿಕ್ಕಣ್ಣ ಹೇಳಿಕೊಂಡಿದ್ದಾರೆ.
“ನನ್ನದೇ ಲಕ್ಷ್ಮಿ ಮನೆಗೆ ಬರುತ್ತಿದ್ದಾಳೆ. ಹವ್ಯಾಸಿ ನಟನೆಯಿಂದ ಟಿವಿ, ಸಿನಿಮಾ ವರೆಗೂ ಹಲವು ಹಂತ ನೋಡಿದ್ದೇನೆ. ಈ ಹೊಸ ಅಧ್ಯಾಯ ಅತ್ಯಂತ ಮರೆಯಲಾಗದ್ದು. ನನ್ನ ತಾಯಿ ಕೂಲಿ ಕೆಲಸ ಮಾಡಿ ನನ್ನನ್ನು ಓದಿಸಿದ್ದಾರೆ. ಎಲ್ಲರ ಸಮ್ಮುಖದಲ್ಲಿ ನನ್ನ ಮದುವೆ ನೋಡುವುದು ಅವರ ಕನಸಾಗಿತ್ತು” ಎಂದು ಚಿಕ್ಕಣ್ಣ ಭಾವುಕರಾಗಿ ಹೇಳಿದ್ದಾರೆ.
ಮದುವೆಗೂ ಮುನ್ನ ಚಿಕ್ಕಣ್ಣ ಅವರು ತಮ್ಮ ಆತ್ಮೀಯ ಗೆಳೆಯ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ನಿವಾಸಕ್ಕೆ ತೆರಳಿ ಖುದ್ದು ಆಮಂತ್ರಣ ನೀಡಿದ್ದರು. ಕಿರಾತಕ, ರಾಜಾ ಹುಲಿ, ಮಾಸ್ಟರ್‌ಪೀಸ್ ಸಿನಿಮಾಗಳಲ್ಲಿ ಯಶ್ ಜೊತೆ ಚಿಕ್ಕಣ್ಣ ನಟಿಸಿದ್ದರು.
ಆರತಕ್ಷತೆಗೆ ಸ್ಯಾಂಡಲ್‌ವುಡ್‌ನ ದಿಗ್ಗಜರೇ ಆಗಮಿಸಿದ್ದರು.ತಾರಾ, ರಂಗಾಯಣ ರಘು, ಅರುಣ್ ಸಾಗರ್, ಕೋಮಲ್ ಕುಮಾರ್, ಶ್ರೀಮುರಳಿ, ಅಭಿಷೇಕ್ ಅಂಬರೀಶ್, ಧನ್ವೀರ್, ಮೇಘನಾ ಗಾಂವ್ಕರ್, ಆದಿತಿ ಪ್ರಭುದೇವ, ನಿರ್ಮಾಪಕ ಉಮಾಪತಿ ಶ್ರೀನಿವಾಸ್, ತೆಲುಗು ನಟ ಸುನಿಲ್* ಸೇರಿದಂತೆ ಹಲವರು ಭಾಗಿ.
ಮದುವೆ ಬೆನ್ನಲ್ಲೇ ಚಿಕ್ಕಣ್ಣ ಅವರ ಎರಡನೇ ಹೀರೋ ಸಿನಿಮಾ ‘ಲಕ್ಷ್ಮೀಪುತ್ರ’ ನವೆಂಬರ್ 27 ರಂದು ಬಿಡುಗಡೆಗೆ ಸಿದ್ಧವಾಗಿದೆ. ವರಮಹಾಲಕ್ಷ್ಮಿ ಪೂಜೆಯನ್ನು ಚಿತ್ರತಂಡ ಮದುವೆ ಸಂಭ್ರಮದ ನಡುವೆಯೇ ಆಯೋಜಿಸಿತ್ತು.
