EntertainmentLatestಸ್ಯಾಂಡಲ್​ವುಡ್-Sandalwood

ಟಾಕ್ಸಿಕ್ ಸಿನಿಮಾ ವೀಕ್ಷಿಸಿದ ಶಿವಣ್ಣ ಪ್ರತಿಕ್ರಿಯೆ ಹೇಗಿತ್ತು..?

ವಿಶ್ವದಾದ್ಯಂತ ತೆರೆಕಂಡಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾವನ್ನು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ವೀಕ್ಷಿಸಿದ್ದಾರೆ. ಸಿನಿಮಾ ವೀಕ್ಷಣೆಯ ಬಳಿಕ ಮಾತನಾಡಿದ ಶಿವಣ್ಣ, ಯಶ್ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಸಿನಿಮಾದಲ್ಲಿ ಯಶ್ ಅದ್ಭುತವಾಗಿ ಮಿಂಚಿದ್ದಾರೆ. ಕೊನೆಯ 20 ನಿಮಿಷ ಅಂತೂ ಗೇಮ್ ಚೇಂಜಿಂಗ್. ನೆಗೆಟಿವ್ ಯಾರು ಮಾಡ್ತಾರೆ ಅಂತ ನೀವೇ ಹುಡುಕಬೇಕು. ‘ಯಶ್ ಸಿನಿಮಾ’ ಅಂದರೆ ನಮ್ಮ ಹುಡುಗನ ಸಿನಿಮಾ. ನನ್ನ ತಮ್ಮನನ್ನು ನೋಡಿದ ಹಾಗೆ ಯಶ್ ಅವರನ್ನು ನೋಡ್ತೀನಿ” ಎಂದು ಶಿವಣ್ಣ ಹೇಳಿದ್ದಾರೆ.

ಯಶ್ ಅವರ ‘ರಾಯ’ ಹಾಗೂ ‘ಟಿಕೆಟ್ 2’ ಗೆಟಪ್‌ಗಳು ತಮಗೆ ತುಂಬಾ ಇಷ್ಟವಾಗಿವೆ. ಕೊನೆಯಲ್ಲಿ ಯಶ್ ಸಖತ್ ಆಗಿ ಕಾಣಿಸಿದ್ದಾರೆ ಎಂದು ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ನಾನೇ ಟಿಕೆಟ್ ಬುಕ್ ಮಾಡಿಕೊಂಡು ಸಿನಿಮಾ ನೋಡಿದ್ದೇನೆ. ಯಶ್ ಅವರು ಒಂದು ಉತ್ತಮ ಪ್ರಯತ್ನ ಮಾಡಿದ್ದಾರೆ” ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

Share with Friends
author avatar
Digital Desk