LatestTop Storiesಬಳ್ಳಾರಿ-Ballary

ಭಾರಿ ಅದ್ದೂರಿಯಾಗಿ ಜರುಗಿದ ಸಿದ್ದಾರೂಢರ ತೆಪ್ಪೋತ್ಸವ

ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯ ಆರಾಧ್ಯದೈವ ಎಂದೇ ನಾಮಾಂಕಿತರಾದ ಸದ್ಗುರು ಸಿದ್ದಾರೂಢರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಾಗೂ ಸಿದ್ಧಾರೂಢ ಸ್ವಾಮೀಜಿಯವರ ಪುಣ್ಯಾರಾಧನೆ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ತೆಪ್ಪೋತ್ಸವ ಹಾಗೂ ಜಲ ರಥೋತ್ಸವ ಅದ್ಧೂರಿಯಾಗಿ ಜರುಗಿತು.

ಎಲ್ಲೆಡೆಯೂ ಓಂಕಾರ ನಾದದಿಂದ ಸಿದ್ಧಾರೂಢರ ಮಠದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸದ್ಗುರು ಸಿದ್ಧಾರೂಢರ 97ನೇ ವರ್ಷದ ಪುಣ್ಯಾರಾಧನೆ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ತೆಪ್ಪೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುವ ಮೂಲಕ ಸಿದ್ಧಾರೂಢ ಶ್ರೀಗಳ ಕೃಪೆಗೆ ಪಾತ್ರರಾದರು.

ನಗರದ ಸಿದ್ಧಾರೂಢರ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಟ್ರಸ್ಟ್ ಕಮಿಟಿ ಆಶ್ರಯದಲ್ಲಿ ನಡೆದ ತೆಪ್ಪೋತ್ಸವಕ್ಕೆ ವಿವಿಧ ಭಾಗಗಳಿಂದ ಸಾವಿರಾರು ಜನರು ಸಾಕ್ಷಿಯಾದರು.
ಇನ್ನೂ ಕಣ್ಣು ಹಾಯಿಸಿದ ಕಡೆಯಲ್ಲಿ ಜನ ಸಾಗರವೇ ನೆರೆದಿತ್ತು. ಓಂ ನಮ: ಶಿವಾಯ… ನಾಮಸ್ಮರಣೆಗಳು ಅನುರುಣಿಸಿದವು.

ಕಲ್ಯಾಣಿಯಲ್ಲಿ ತೇರು ಐದು ಸುತ್ತ ಪ್ರದಕ್ಷಿಣೆ ಹಾಕಿತು. ಕಲ್ಯಾಣಿಯ ಸುತ್ತ ಕಿಕ್ಕಿರಿದು ಸೇರಿದ ಭಕ್ತರು ಉತ್ತತ್ತಿ, ಬಾಳೆಹಣ್ಣು, ಲಿಂಬೆಹಣ್ಣು ಎಸೆದು ಸ್ವಾಮಿಯ ಆಶೀರ್ವಾದ ಪಡೆದು ಕೃತಾರ್ಥರಾದರು. ರಾಜ್ಯ ಅಲ್ಲದೇ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶದಿಂದ ಆಗಮಿಸಿದ ಭಕ್ತರು ಜಲರಥೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಸಿದ್ಧಾರೂಢರ ಆಶೀರ್ವಾದ ಪಡೆದುಕೊಂಡರು.

Share with Friends
author avatar
Digital Desk