EntertainmentLatestಬೆಂಗಳೂರು-Bengaluruರಾಜ್ಯ-Karnatakaಸ್ಯಾಂಡಲ್​ವುಡ್-Sandalwood

ದರ್ಶನ್‌ ಭೇಟಿಗೆ ಪರಪ್ಪನ ಅಗ್ರಹಾರಕ್ಕೆ ಬಂದ ನಟ ವಿನೋದ್ ಪ್ರಭಾಕರ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್‌ ಹಾಗೂ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟ ದರ್ಶನ್‌ (Challenging Star Darshan) ಹಾಗೂ ಗ್ಯಾಂಗ್‌ ಜೈಲು ಸೇರಿದೆ. ದರ್ಶನ್‌ರನ್ನು ಭೇಟಿಯಾಗಲು ಇಂದು ನಟ ವಿನೋದ್ ಪ್ರಭಾಕರ್ (Vinod Prabhakar) ಅವರು ಪರಪ್ಪನ ಅಗ್ರಹಾರದ ಬಳಿ ಬಂದಿದ್ದಾರೆ

ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಭೇಟಿಗೆ ಅವಕಾಶ ಕೇಳಿದ್ದೆ, ಒಳಗೆ ಬಿಟ್ರೆ ಭೇಟಿ ಆಗುತ್ತೇನೆ. ಕುಟುಂಬದವರಿಗೆ ಮಾತ್ರ ಅವಕಾಶ ಅಂತ ಹೇಳಿದ್ದಾರೆ. ನೊಡೋಣ ಒಳಗಡೆ ಹೋಗಿ ಅಧಿಕಾರಿಗಳಿಗೆ ಕೇಳಿ ಭೇಟಿ ಆಗ್ತೇನೆ ಎಂದರು. ಅಂತೆಯೇ ಇದೀಗ ದರ್ಶನ್‌ ರನ್ನು ಭೇಟಿ ಮಾಡಿ ವಿನೋದ್‌ ಪ್ರಭಾಕರ್‌ ತಮ್ಮ ಕಾರಿನಲ್ಲಿ ಹೊರಟರು. ಇದನ್ನೂ ಓದಿ: ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ ರಾಜ್ಯದ ಸಂಸದರು

ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್‌ ಮಾಡಿದ್ದಾನೆ ಎಂದು ಆರೋಪಿಸಿ ದರ್ಶನ್‌ ಹಾಗೂ ಗ್ಯಾಂಗ್‌ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆತಂದಿದೆ. ನಂತರ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ಚಿತ್ರಹಿಂಸೆ ಕೊಟ್ಟು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಸದ್ಯ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಗೆಳತಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 14 ಮಂದಿಯನ್ನು ಜೈಲಿಗಟ್ಟಲಾಗಿದೆ.ಇದನ್ನೂ ಓದಿ: ತೆಲಂಗಾಣದಲ್ಲಿ ಮತ್ತೊಬ್ಬ ಬಿಆರ್​ಎಸ್​ ಶಾಸಕ ಕಾಂಗ್ರೆಸ್​ಗೆ ಸೇರ್ಪಡೆ

https://youtu.be/OvXrOZlPR8I?si=TGAa05BuafFKMISN
Share with Friends
author avatar
News Desk