Latestಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

ಪ್ರಜ್ವಲ್‌ ಕಳಂಕ ತೊಳೆದುಕೊಳ್ಳುವವರೆಗೂ ಹೆಚ್‌ಡಿಡಿ ಕುಟುಂಬದವರು ರಾಜೀನಾಮೆ ಕೊಡಲಿ: ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಮಾಜಿ ಪ್ರಧಾನಿಗಳ ಕುಟುಂಬಕ್ಕೆ ಕಳಂಕ ತಂದಿದ್ದಾರೆ. ಈ ಕಳಂಕ ತೊಳೆದುಕೊಳ್ಳುವವರೆಗೂ ದೇವೇಗೌಡರ (Devegowda) ಕುಟುಂಬದವರು ರಾಜೀನಾಮೆ (Resignation) ಕೊಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಠಕ್ಕರ್‌ ಕೊಟ್ಟಿದ್ದಾರೆ.

ಜೆಡಿಎಸ್‌ (JDS) ನಾಯಕರು ಪ್ರಜ್ವಲ್‌ ಯಾಕೆ ಹೀಗೆ ಮಾಡಿದ ಎಂದು ಹೇಳುತ್ತಿಲ್ಲ. ನಮ್ಮ ಮನೆ ಮಗ ತಪ್ಪು ಮಾಡಿದ್ದಾನೆ. ನಮ್ಮ ಕುಟುಂಬದ ಮೇಲೆ ಈ ಕಳಂಕ ಇದೆ. ಮನೆ ಮಗನಿಗೆ ಏನೂ ಆಗಬಾರದು, ಕುಟುಂಬದ ಪ್ರಖ್ಯಾತಿಯ ಬಗ್ಗೆ ಮಾತ್ರ ಅವರಿಗೆ ಕಾಳಜಿ. ಪ್ರಜ್ವಲ್‌ಗೆ ಮಾನಸಿಕ ರೋಗ ಇತ್ತು. ಅದಕ್ಕೆ ಚಿಕಿತ್ಸೆ ಕೊಡಿಸುತ್ತೇವೆ ಎಂದು ಅವರ ಮನೆಯವರು ಹೇಳಿದ್ದಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅನ್ಯಕೋಮಿನ ಯುವಕನಿಂದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ –ಆರೋಪಿ ಅಂದರ್‌

https://youtu.be/OMuk5-xqtY8?si=fwto6KHqt7aVtD_B

ಈ ಕುಟುಂಬದಲ್ಲೇ ಮೇಲ್ಮನೆ, ಕೆಳಮನೆ, ರಾಜ್ಯಸಭೆ ಸದಸ್ಯರಿದ್ದಾರೆ. ಈ‌ ಕಳಂಕ ಅಳಿಸುವವರೆಗೂ ರಾಜೀನಾಮೆ ಕೊಡುತ್ತೇವೆ ಎಂದು ಯಾಕೆ ಅವರು ಹೇಳುತ್ತಿಲ್ಲ? ಪ್ರಜ್ವಲ್‌ ಜರ್ಮನಿಗೆ (Germany) ಹೋಗಿದ್ದಾರೆ. ವಿಚಾರಣೆಗೆ ಕರೆದಾಗ ಬರುತ್ತಾರೆ ಎಂದಿದ್ದರು. ಈಗ ಪ್ರಜ್ವಲ್ ಎಲ್ಲಿದ್ದಾನೆ ಅಂತ ಗೊತ್ತಿಲ್ಲ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಜ್ಜಿ ಮನೆಗೆ ಬಂದಿದ್ದ ಬಾಲಕ ಟ್ರ‍್ಯಾಕ್ಟರ್ ರೊಟಾವೆಲ್ಟರ್‌ಗೆ ಸಿಲುಕಿ ಸಾವು- ದೇಹ ಛೀದ್ರ ಛೀದ್ರ

ಪ್ರಜ್ವಲ್ ರನ್ನು ಕರೆತರಲು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಎಸ್‌ಐಟಿಗೆ ಸಹಾಯ ಮಾಡಲಿ. ದೇಶದ ಒಳಗೆ ಇದ್ದರೆ ನಾವು ಹೇಗಾದರೂ ಹಿಡಿಯಬಹುದು. ವಿದೇಶದಲ್ಲಿ ಇದ್ದಾಗ ನಮಗೆ ಕೇಂದ್ರದ ಸಹಕಾರ ಬೇಕಾಗುತ್ತದೆ. ಪ್ರಜ್ವಲ್‌ಅನ್ನು ನಾವು ಕರೆತರಲು ಕೆಲವು ಕಾನೂನು ಚೌಕಟ್ಟು ಇದೆ. ಹಾಗಾಗಿ ಕೇಂದ್ರ ಸಕಾರದ ನೆರವು ಬೇಕಾಗುತ್ತದೆ ಎಂದು ಖರ್ಗೆ ತಿಳಿಸಿದ್ದಾರೆ.ಇದನ್ನೂ ಓದಿ: ಪೆನ್‌ಡ್ರೈವ್ ಪ್ರಕರಣದಲ್ಲಿ ಅನೇಕರು ಭಾಗಿಯಾಗಿದ್ದಾರೆ – ಕೊನೆಗೂ ಹೆಚ್‌ಡಿಡಿ ಪ್ರತಿಕ್ರಿಯೆ

https://youtu.be/yQhaOSOME_w?si=OoDjumimz19m_F56

ಪ್ರಜ್ವಲ್ ದೇಶದ ಒಳಗೆ ಇದ್ದರೆ ನಾವು ಹೇಗಾದರೂ ಹಿಡಿಯಬಹುದು.‌ ವಿದೇಶದಲ್ಲಿ ಇದ್ದಾಗ ನಮಗೆ ಕೇಂದ್ರದ ಸಹಕಾರ ಬೇಕಾಗುತ್ತದೆ. ನಾವು ಪ್ರಜ್ವಲ್ ಕರೆತರಲು ಕೆಲವು ಕಾನೂನು ಚೌಕಟ್ಟು ಇದೆ. ಕೆಲ ಕಾನೂನು ಅಡೆತಡೆ ಇದೆ. ಹೀಗಾಗಿ ಕೇಂದ್ರ ಸರ್ಕಾರದ ನೆರವು ಬೇಕಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.ಇದನ್ನೂ ಓದಿ: ಸ್ವಾತಿ ಮಲಿವಾಲ್‌ ಮೇಲೆ ದೌರ್ಜನ್ಯ – ಕೇಜ್ರಿವಾಲ್‌ ಆಪ್ತ ಸಹಾಯಕ ಪೊಲೀಸರ ವಶ

ಬಿಜೆಪಿಯವರಿಗೆ ನೈತಿಕತೆ ಇದ್ದರೆ ಕೇಂದ್ರಕ್ಕೆ ಪತ್ರ ಬರೆದು ಎಸ್ಐಟಿ ಗೆ ಸಹಕಾರ ಕೊಡಿ ಅನ್ನಲಿ. ಸಂತ್ರಸ್ತೆಯರಿಗೆ ಬಿಜೆಪಿ, ಜೆಡಿಎಸ್‌ ನಾಯಕರು ಸಾಂತ್ವನ ಹೇಳಿದ್ದಾರಾ? ತಮ್ಮ ಮನೆ ಮಗನನ್ನು ಕಾಪಾಡುವುದ ಹೇಗೆ ಎಂಬುರ ಬಗ್ಗೆ ಮಾತ್ರ ಜೆಡಿಎಸ್‌ ಗಮನವಿದೆ. ಬಿಜೆಪಿ, ಜೆಡಿಎಸ್‌ ಸಂತ್ರಸ್ತೆಯರನ್ನು ಮರೆತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೇಜ್ರಿವಾಲ್‌ ನಿವಾಸದ ಸಿಸಿಟಿವಿ ಟ್ಯಾಂಪರಿಂಗ್‌ ಮಾಡಲಾಗುತ್ತಿದೆ: ಸ್ವಾತಿ ಮಲಿವಾಲ್‌ ಆರೋಪ

https://youtu.be/Z6BjQRIWnVA?si=6jNU04bW-lDMsbnc
Share with Friends
author avatar
News Desk