
‘ದೊಡ್ಮನ್ಸ’ ಚಿತ್ರದ ಟ್ರೇಲರ್ ರಿಲೀಸ್
ಬೆಂಗಳೂರು: ವೇದಿಕ್ ಕಾಸ್ಮೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ, ಶರತ್ ಕೃಷ್ಣ ನಿರ್ದೇಶನದ ‘ದೊಡ್ಮನ್ಸ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
ಶರತ್ ಕೃಷ್ಣ, ರೇಷ್ಮಾ ಹಾಗೂ ಶಿಲ್ಪಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಟ್ರೇಲರ್ ಪಕ್ಕಾ ಆಕ್ಷನ್ ಪ್ಯಾಕ್ಡ್ ಮನರಂಜನೆಯನ್ನು ಪ್ರೇಕ್ಷಕರಿಗೆ ನೀಡುವ ಭರವಸೆ ಮೂಡಿಸಿದೆ. ಹೀರೋನ ಮಾಸ್ ಅವತಾರ, ರೋಚಕ ಫೈಟ್ ದೃಶ್ಯಗಳು ಹಾಗೂ ಸ್ಟೈಲಿಶ್ ಆ್ಯಕ್ಷನ್ ಸನ್ನಿವೇಶಗಳು ಟ್ರೇಲರ್‌ನ ಪ್ರಮುಖ ಆಕರ್ಷಣೆಯಾಗಿವೆ.
ಇದರ ಜೊತೆಗೆ, ಟ್ರೇಲರ್‌ನಲ್ಲಿ ಮುಗ್ಧ ಪ್ರೇಮಕಥೆಯ ಝಲಕ್ ಕೂಡ ಅನಾವರಣಗೊಂಡಿದ್ದು, ಆಕ್ಷನ್ ಮತ್ತು ಭಾವನಾತ್ಮಕ ಅಂಶಗಳ ಸಮನ್ವಯವನ್ನು ಚಿತ್ರ ಹೊಂದಿರಲಿದೆ ಎಂಬ ಸುಳಿವು ನೀಡಿದೆ. ಒಟ್ಟಾರೆ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಉತ್ತಮ ನಿರೀಕ್ಷೆ ಮೂಡಿಸುವಲ್ಲಿ ಟ್ರೇಲರ್ ಯಶಸ್ವಿಯಾಗಿದೆ.
ಚಿತ್ರದಲ್ಲಿ ಬಾಲ ರಾಜ್ವಾಡಿ, ಹುಲಿ ಕಾರ್ತಿಕ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ದೊಡ್ಮನ್ಸ’ ಇದೇ ತಿಂಗಳ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
