
ಪ್ರಯಾಣಿಕನ ಲಗೇಜ್‌ನಲ್ಲಿ ವಿವಿಧ ಜಾತಿಯ ಜೇಡಗಳು ಪತ್ತೆ
ದೇವನಹಳ್ಳಿ.ಸೆ,18- ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕನೊಬ್ಬನ ಚೆಕ್‌ಇನ್ ಲಗೇಜ್‌ನಲ್ಲಿ ವಿವಿಧ ಜಾತಿಯ ಜೇಡಗಳು ಪತ್ತೆಯಾಗಿರುವ ಘಟನೆ ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಏರ್ ಏಷ್ಯಾ ವಿಮಾನದ ಎಫ್‌ಡಿ-137 ಮೂಲಕ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕನ ಲಗೇಜ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಜೇಡಗಳು ಪತ್ತೆಯಾಗಿವೆ.
ಘಟನೆಗೆ ಸಂಭಂದಿಸಿದಂತೆ ಅರಣ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಕಸ್ಟಮ್ಸ್ ಅಧಿಕಾರಿಗಳು, ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಯನ್ನು ಯಾಶರ್ ಸಾಮಿಯುಲ್ಲಾ ಶೆರೀಫ್ ಉಮೇರಾ ಬಾನು ಎಂದು ಗುರುತಿಸಲಾಗಿದೆ. ಜೇಡಗಳನ್ನು ಯಾವ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿತ್ತು ಹಾಗೂ ಅವುಗಳ ಮೂಲದ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
