LatestTop Storiesಬೆಂಗಳೂರು-Bengaluru

ಹಸಿ ಒಣ ಕಸ ಬೇರ್ಪಡಿಸದ ಪಿವಿಆರ್, ಫೋರಂ ಮಾಲ್‌ಗೆ ದಂಡ

ಬೆಂಗಳೂರು .ಸೆ18- ಹಸಿ ಮತ್ತು ಒಣ ಕಸವನ್ನು ಮೂಲದಲ್ಲೇ ಸಮರ್ಪಕವಾಗಿ ವಿಂಗಡಿಸದ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಂಡಿರುವ ಅಧಿಕಾರಿಗಳು, ಒಟ್ಟು 1,25,839 ದಂಡ ವಸೂಲಿ ಮಾಡಿದ್ದಾರೆ.

ನಗರದ ಹೊಸೂರು ರಸ್ತೆಯಲ್ಲಿರುವ ಪಿವಿಆರ್ ಸಿನಿಮಾಸ್‌ಗೆ ಕಸ ವಿಂಗಡಣೆ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ.

ಇದೇ ವೇಳೆ ಫೋರಂ ಮಾಲ್‌ಗೆ 50,839 ದಂಡ ವಿಧಿಸಲಾಗಿದೆ.ತಪಾಸಣೆ ವೇಳೆ ಎಸ್‌ಟಿಪಿ ತ್ಯಾಜ್ಯವನ್ನು ಅಕ್ರಮವಾಗಿ ಸುರಿದಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಮಾಲ್ ಸಿಬ್ಬಂದಿಗೆ ಈ ದಂಡ ವಿಧಿಸಲಾಗಿದೆ.

ಹಸಿ ಮತ್ತು ಒಣ ಕಸವನ್ನು ಮೂಲದಲ್ಲೇ ಸಮರ್ಪಕವಾಗಿ ವಿಂಗಡಿಸುವಂತೆ ಅಧಿಕಾರಿಗಳು ಸೂಚಿಸಿದ್ದು, ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ದಂಡದ ಜೊತೆಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Share with Friends
author avatar
Digital Desk