BlogLatestTop Storiesಬೆಂಗಳೂರು-Bengaluru

ಬಿಬಿಎಂಪಿ ಶಾಲಾ ಮಕ್ಕಳಿಗೆ ಸದ್ಯಕ್ಕಿಲ್ಲ ಶೂ ಭಾಗ್ಯ

ಬೆಂಗಳೂರು : ಸರ್ಕಾರಿ ಸಂಸ್ಥೆ ಲಿಡ್ಕರ್ ಶೂ ಸರಬರಾಜು ಮಾಡಲು ವಿಫಲವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಶಾಲಾ ಮಕ್ಕಳಿಗೆ ಸದ್ಯಕ್ಕೆ ಶೂ ಭಾಗ್ಯ ಇಲ್ಲದಂತಾಗಿದೆ. ಮಳೆಗಾಲದಲ್ಲಿ ಶೂ ಇಲ್ಲದೇ ಚಪ್ಪಲಿ ಹಾಕಿಕೊಂಡು ಮಕ್ಕಳು ಶಾಲೆಗೇ ಹೋಗುವ ಪರಿಸ್ಥಿತಿಗೆ ತಂದಿತ್ತಿದೆ ಲಿಡ್ಕರ್.

ಕಳೆದ ವರ್ಷ ಬಿಬಿಎಂಪಿ ವಿದ್ಯಾರ್ಥಿಗಳಿಗೆ ಶೂ ಸರಬರಾಜು ಮಾಡಲು ಒಪ್ಪಿಕೊಂಡಿದ್ದ ಲಿಡ್ಕರ್ ಸಂಸ್ಥೆ ಶೂ ಸರಬರಾಜು ಮಾಡಲು ವಿಫಲವಾದ ಹಿನ್ನೆಲೆಯಲ್ಲಿ ಸರ್ಕಾರಿ ಸಂಸ್ಥೆಯನ್ನು ಕೈ ಬಿಟ್ಟು ಖಾಸಗಿ ಕಂಪನಿಗೆ‌ ಬಿಬಿಎಂಪಿ ಶೂ ಸಪ್ಲೈಗೆ ಟೆಂಡರ್ ಕರೆದಿದೆ.

ಕಳೆದ ವರ್ಷ ವಿದ್ಯಾರ್ಥಿಗಳಿಗೆ ಬಹುದಿನಗಳ ನಂತರ ಶೂ ಸರಬರಾಜು ಮಾಡಿ ವಿಫಲವಾಗಿರುವ ಲಿಡ್ಕರ್ ಸಂಸ್ಥೆ, ಶೂ ಸರಬರಾಜು ಮಾಡಲು ವಿಫಲವಾಗಿದ್ದಕ್ಕೆ ಖಾಸಗಿ ಯವರಿಗೆ ಟೆಂಡರ್ ಬಿಬಿಎಂಪಿ ನೀಡಿದೆ.

Share with Friends
author avatar
News Desk