
ಯುವತಿಯೊಂದಿಗೆ ಅನುಚಿತ ವರ್ತನೆ ,ವ್ಯಕ್ತಿಗೆ ಧರ್ಮದೇಟು
ನೆಲಮಂಗಲ,ಜು.13: ಬಸ್‌ನಲ್ಲಿ ಯುವತಿ ಜೊತೆಗೆ ಅನುಚಿತವಾಗಿ ವರ್ತಿಸಿದ ಸಹ ಪ್ರಯಾಣಿಕರು ಧರ್ಮದೇಟು ನೀಡಿದ ಘಟನೆ ನಡೆದಿದೆ.
ಸದ್ಯ ಬೆಂಗಳೂರಿನಿಂದ ನೆಲಮಂಗಲದತ್ತ ಹೊರಟ್ಟಿದ್ದ ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಈ ಘಟನೆ ನಡೆದಿದ್ದು, ಯುವತಿಯೊಬ್ಬಳ ಜೊತೆಗೆ ವ್ಯಕ್ತಿ ಅನುಚಿತವಾಗಿ ನಡೆದುಕೊಂಡಿದ್ದಾನೆ.
ಈ ವೇಳೆ ವ್ಯಕ್ತಿಯ ಇಂತಹ ವರ್ತನೆಯಿಂದ ಬೇಸತ್ತು ಯುವತಿ ಕಣ್ಣೀರು ಹಾಕಿದ್ದಾಳೆ. ಬಳಿಕ ಬಸ್‌ನಲ್ಲೇ ವ್ಯಕ್ತಿ ಕಪಾಳಕ್ಕೆ ಯುವತಿ ಬಾರಿಸಿದ್ದಾಳೆ.ಅಲ್ಲದೆ, ಸಹ ಪ್ರಯಾಣಿಕರು ಸಹ ಧರ್ಮದೇಟು ನೀಡಿದ್ದಾರೆ.
ಇದೇ ವೇಳೆ ಘಟನೆಯ ಬಗ್ಗೆ ಯುವತಿಯೊಬ್ಬಳು ತನ್ನ ಸೋಶಿಯಲ್ ವ್ಯಕ್ತಿಯ ಅನುಚಿತ ವರ್ತನೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾಳೆ.
