LatestTop Storiesಕಲಬುರಗಿ-Kalaburagi

ಕೆಪಿಎಸ್‌ಸಿ ಪಶುವೈದ್ಯಕೀಯ ನೇಮಕಾತಿ ಅಕ್ರಮ – ಅಭ್ಯರ್ಥಿ ಮನೆ ಮೇಲೆ ಸಿಐಡಿ ದಾಳಿ

ಕಲಬುರಗಿ:ಕೆ ಪಿ ಎಸ್ ಸಿ ಪಶುವೈದ್ಯಕೀಯ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದೆ.

ನೇಮಕಾತಿ ಅಕ್ರಮ ಸಂಬಂಧ ಸಿಐಡಿ ಅಧಿಕಾರಿಗಳಿಂದ ದಾಳಿ ನಡೆದಿದೆ. ಪಶುವೈದ್ಯ ನೇಮಕಾತಿ ಅಭ್ಯರ್ಥಿ ಮಮತಾ ಮನೆ ಮೇಲೆ ಸಿಐಡಿ ದಾಳಿ ನಡೆದಿದೆ.ಕಲಬುರಗಿ ನಗರದ ನ್ಯೂ ಓಜಾ ಲೇಔಟ್ ನಲ್ಲಿರುವ ಮನೆ ಮೇಲೆ ದಾಳಿ ನಡೆದಿದ್ದು, ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಕೆ ಪಿ ಎಸ್ ಸಿ ಸದಸ್ಯೆ ಶಾಂತಾ ಹೊಸಮನಿ ಕಡೆಯ ಅಭ್ಯರ್ಥಿಯಾಗಿರುವ ಮಮತಾ ಎಂದು ಆರೋಪ ಕೇಳಿಬಂದಿದೆ. ಶಾಂತಾ ಹೊಸಮನಿ ಮೂಲಕ ಡೀಲ್ ಮಾಡಿ ನೇಮಕವಾಗಿದ್ದ ಮಮತಾ ಎಂಬ ಗಂಭೀರ ಆರೋಪವಿದೆ.

ಸಿಐಡಿ ಬೆಂಗಳೂರು ಡಿ ವೈ ಎಸ್ ಪಿ ಹಾಗೂ ಕಲಬುರಗಿ ಡಿ ವೈ ಎಸ್ ಪಿ ಅಸ್ಲಾಂ ಪಾಷಾ ನೇತೃತ್ವದ ತಂಡದಿಂದ ದಾಳಿ ನಡೆದಿದೆ. ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳ ತಂಡವು ಏಕಕಾಲದಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದೆ.

ಈ ಪ್ರಕರಣದಲ್ಲಿ 400 ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಪ್ರತಿ ಹುದ್ದೆಗೆ 80 ಲಕ್ಷದಿಂದ 1 ಕೋಟಿ ರೂ. ವರೆಗೆ ಡೀಲ್ ನಡೆದಿದೆ ಎಂದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ಓಎಂಆರ್ ಶೀಟ್ ತಿರುಚುವಿಕೆ ನಡೆದಿದೆ ಎನ್ನಲಾಗಿದೆ. ಈಗಾಗಲೇ 35ಕ್ಕೂ ಹೆಚ್ಚು ಬ್ಯಾಂಕ್ ಅಕೌಂಟ್ ಫ್ರೀಜ್ ಮಾಡಲಾಗಿದೆ.

Share with Friends
author avatar
Digital Desk