LatestTop Storiesರಾಜ್ಯ-Karnatakaರಾಷ್ಟ್ರೀಯ-National

ಸಚಿವ ಸತೀಶ್ ಜಾರಕಿಹೊಳಿಗೆ ಇ.ಡಿ ಶಾಕ್ – 15 ಕಡೆ ಏಕಕಾಲಕ್ಕೆ ದಾಳಿ

ಬೆಂಗಳೂರು/ಬೆಳಗಾವಿ:ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇ.ಡಿ ದಾಳಿ ನಡೆದಿದೆ.

ಬೆಂಗಳೂರು, ಬೆಳಗಾವಿ, ಮಹಾರಾಷ್ಟ್ರ ಸೇರಿ ಒಟ್ಟು 15 ಕಡೆ ಜಾರಿ ನಿರ್ದೇಶನಾಲಯ (ED) ಪರಿಶೀಲನೆ ನಡೆಸುತ್ತಿದೆ. ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸ, ಸದಾಶಿವನಗರದ ಸರ್ಕಾರಿ ನಿವಾಸ, ಗೋಕಾಕ್ ನಿವಾಸ ಸೇರಿದಂತೆ 15 ಕ್ಕೂ ಅಧಿಕ ಸ್ಥಳಗಳಲ್ಲಿ ಬುಧವಾರ ಬೆಳಗ್ಗೆ 7 ಗಂಟೆಯಿಂದ ದಾಳಿ ನಡೆದಿದೆ.

ಸಂಬಂಧಿ ಹಾಗೂ ಅಧಿಕಾರಿ ಮಂಜುನಾಥ್ ಅಬಕಾರಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳಿಂದ ದಿಢೀರ್ ದಾಳಿ ಎನ್ನಲಾಗಿತ್ತು. ಆದರೆ ಈ ದಾಳಿಗೂ ಮಂಜುನಾಥ್ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಇಡಿ ಸ್ಪಷ್ಟಪಡಿಸಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA)-1999 ಅಡಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಇಡಿ ಮಾಹಿತಿ ನೀಡಿದೆ. ದಕ್ಷಿಣ ಆಫ್ರಿಕಾ, ಉಗಾಂಡದಲ್ಲಿ ಅಕ್ರಮ ಹೂಡಿಕೆ ಆರೋಪದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಯುತ್ತಿದೆ.

18 ಅನಧಿಕೃತ ಬಾರ್ ಲೈಸೆನ್ಸ್ ನೀಡಿ ನೆರವಾಗಿರುವ ಆರೋಪ ಎದುರಿಸುತ್ತಿರುವ ಸಚಿವ ಜಾರಕಿಹೊಳಿ. ಸಚಿವರ ಪ್ರಭಾವ ಬಳಸಿ 18 ಬಾರ್‌ಗಳಿಗೆ ಅನಧಿಕೃತ ಲೈಸೆನ್ಸ್ ಕೊಡಿಸಲು ಸಹಾಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅಕ್ರಮ ವಿದೇಶಿ ಹಣ ಹೂಡಿಕೆ ಹಾಗೂ ಮನಿ ಲಾಂಡ್ರಿಂಗ್ ಶಂಕೆ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

ಈ ಹಿಂದೆ ಪತ್ತೆಯಾಗಿದ್ದ 3 ಕೋಟಿ ಅಕ್ರಮ ವಿದೇಶಿ ಹಣ ಮುಂದುವರಿದ ಇ.ಡಿ ತನಿಖೆ. ಈ ಹಿಂದೆ ನಡೆದ ತನಿಖೆಯಲ್ಲಿ 3 ಕೋಟಿ ರೂ.ಗೂ ಅಧಿಕ ಅಕ್ರಮ ವಿದೇಶಿ ಹಣದ ವಹಿವಾಟು ಪತ್ತೆಯಾಗಿತ್ತು ಎಂದು ವರದಿಯಾಗಿದೆ. ಸದ್ಯ ಸಚಿವರು ಬೆಂಗಳೂರಿನ ಸರ್ಕಾರಿ ನಿವಾಸದಲ್ಲೇ ಇದ್ದು, 25ಕ್ಕೂ ಹೆಚ್ಚು ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

Share with Friends
author avatar
Digital Desk