LatestTop Storiesಜಿಲ್ಲಾ ಸುದ್ದಿಗಳು | District Newsಬೆಂಗಳೂರು-Bengaluruರಾಜ್ಯ-Karnataka

ಡಿಕೆಶಿ ಸಿಟಿ ರೌಂಡ್ಸ್..‌ ಆಪರೇಷನ್‌ ಪುಟ್‌ ಪಾತ್‌ ವೀಕ್ಷಣೆ

ಬೆಂಗಳೂರು, ಜು.10 : ರಾಜಧಾನಿ ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯ ಮುಂದುವರೆದಿದ್ದು, ಬೀದಿ ಬದಿ ವ್ಯಾಪಾರಿಗಳಿಂದ ಆಪರೇಷನ್‌ ಪುಟ್‌ ಪಾತ್‌ ಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಆದರೆ ಬೀದಿ ಬದಿ ವ್ಯಾಪಾರಿಗಳ ಭಾರೀ ವಿರೋಧದ ನಡುವೆಯೇ ಹಲವು ಭಾಗಗಳಲ್ಲಿ ಜಿಬಿಎಯಿಂದ ಆಪರೇಷನ್‌ ಪುಟ್‌ ಪಾತ್‌ ನಡೆಯುತ್ತಿದೆ.

ಆಪರೇಷನ್‌ ಪುಟ್‌ ಪಾತ್‌ ಕಾರ್ಯಾಚರಣೆಯ ಪ್ರಗತಿ ವೀಕ್ಷಿಸಿದ ಸಿಎಂ

ಸದ್ಯ ಆಪರೇಷನ್‌ ಪುಟ್‌ ಪಾತ್‌ ಕಾರ್ಯಾಚರಣೆಯ ಪ್ರಗತಿ ವೀಕ್ಷಿಸಲು ಇಂದು ಖುದ್ದಾಗಿ ಸಿಎಂ ಡಿ.ಕೆ.ಶಿವಕುಮಾರ್‌ ಬೆಂಗಳೂರು ಸಿಟಿ ರೌಂಡ್ಸ್‌ ನಡೆಸಿದರು.ಈ ವೇಳೆ ಡಿಕೆಶಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸಾಥ್‌ ನೀಡಿದರು.
ಇನ್ನು ಬೆಳಗಾವಿಯಿಂದ ನೇರವಾಗಿ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಅಲ್ಲಿಂದಲೇ ಬೆಂಗಳೂರು ಸಿಟಿ ರೌಂಡ್ಸ್‌ ಆರಂಭಿಸಿದರು. ಮೊದಲಿಗೆ ಹೆಚ್‌ಎಎಲ್ ಮುಂಭಾಗದ ಫುಟ್‌ಪಾತ್ ಕಾಮಗಾರಿಯನ್ನು ವೀಕ್ಷಿಸಿದ ಸಿಎಂ, ಬಳಿಕ ದೊಡ್ಡನೆಕ್ಕುಂದಿ ಮೆಟ್ರೊ ಪಿಲ್ಲರ್ ಕೆಳಭಾಗದ ರಸ್ತೆ ಹಾಗೂ ದೊಡ್ಡನೆಕ್ಕುಂದಿ ರಸ್ತೆಯ ಫುಟ್‌ಪಾತ್‌ಗಳ ಸ್ಥಿತಿಯನ್ನು ಪರಿಶೀಲಿಸಿದರು.
ನಂತರ ಔಟರ್ ರಿಂಗ್ ರೋಡ್‌ನ ಬೆಳ್ಳಂದೂರಿನಿಂದ ಇಬ್ಲೂರು ಜಂಕ್ಷನ್‌ವರೆಗೆ ನಿರ್ಮಿಸಿರುವ ಪಾದಚಾರಿ ಮಾರ್ಗವನ್ನು ವೀಕ್ಷಿಸಿದ ಡಿಕೆಶಿ, ಇದೇ ಮಾದರಿಯಲ್ಲಿ ನಗರದ ಇತರೆ ಫುಟ್‌ಪಾತ್‌ಗಳನ್ನೂ ಅಭಿವೃದ್ಧಿಪಡಿಸಿ ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳ್ಳಂದೂರಿನಿಂದ ಇಬ್ಲೂರು ಜಂಕ್ಷನ್‌ವರೆಗೆ ನಿರ್ಮಿಸಿರುವ ಪಾದಚಾರಿ ಮಾರ್ಗ ವೀಕ್ಷಿಸಿದ ಡಿಕೆಶಿ

ಬಳಿಕ ಹೆಚ್‌ಎಸ್‌ಆರ್ ಲೇಔಟ್‌ಗೆ ತೆರಳಿದ ವೇಳೆ ಅಲ್ಲಿಯೂ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಪಾದಚಾರಿ ಮಾರ್ಗಗಳ ನಿರ್ವಹಣೆಯನ್ನು ಪರಿಶೀಲಿಸಿದರು.
ಇದಲ್ಲದೆ,ಜಯನಗರ.ಅಶೋಕ ಫೀಲರ್ ಬಳಿ ಒತ್ತುವರಿ ತೆರವು ಕಾರ್ಯ ವೀಕ್ಷಣೆ ನಡೆಸಿ,ಮೆಜೆಸ್ಟಿಕ್ ನ ಧನ್ವಂತರಿ ರಸ್ತೆ.ಮಲ್ಲೇಶ್ವರ ಮುಖ್ಯ ರಸ್ತೆಗಳನ್ನು ವೀಕ್ಷಣೆ ನಡೆಸಿ. ಮುಂದಿನ ದಿನಗಳಲ್ಲಿ ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ನಡೆಸುವ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟರು.ಅಲ್ಲದೆ, ಪಾದಚಾರಿಗಳ ಸುರಕ್ಷತೆಗೆ ಆದ್ಯತೆ ನೀಡುವುದರ ಜೊತೆಗೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರು ಸಿಟಿ ರೌಂಡ್ಸ್‌ ನಡೆಸಿದ ಸಿಎಂ ಡಿಕೆಶಿವಕುಮಾರ್‌

ಇದೇ ವೇಳೆ ನಂದಿನಿ ಸರ್ಕಲ್ ಬಳಿ ಕೆಂಪೇಗೌಡ ಪುತ್ಥಳಿ , ಯೋಗಿ ವೇಮನ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದ ಸಿಎಂ ನೇರವಾಗಿ ಬೊಮ್ಮನಹಳ್ಳಿಗೆ ತೆರಳಿದರು.

Share with Friends
author avatar
Digital Desk