Crime NewsLatestTop Storiesರಾಯಚೂರು

10 ರೂ.ಹಣಕ್ಕಾಗಿ ಜಗಳ : ವ್ಯಕ್ತಿ ಭೀಕರ ಕೊಲೆ

ರಾಯಚೂರು,ಜು.10 : ಜಿಲ್ಲೆಯ ಹಂಚಿನಾಳ ಕ್ಯಾಂಪ್ ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ವ್ಯಕ್ತಿಯೊಬ್ಬನ ಭೀಕರ ಕೊಲೆ ನಡೆದಿದೆ.ಮೇಘನಾಥ್ (42)ಕೊಲೆಯಾದ ವ್ಯಕ್ತಿಯಾಗಿದ್ದು, ರವಿ, ವೀರೇಶ, ನರಸಿಂಹ, ಮಾರೆಪ್ಪ, ರಮೇಶ ಹಾಗೂ ಪ್ರವೀಣ ಎಂಬುವರು ಈತನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕೇವಲ 10 ರೂಪಾಯಿ ವಿಚಾರಕ್ಕೆ ಆರಂಭವಾದ ಜಗಳ ಮೇಘನಾಥ್ ನ ಕೊಲೆಯಲ್ಲಿ ಅಂತ್ಯವಾಗಿದೆ. ಜು.8ರಂದು ರಾತ್ರಿ ಹಂಚಿನಾಳ ಪೆಟ್ರೋಲ್ ಬಂಕ್‌ನಲ್ಲಿ ಮಹೇಶ ಪೆಟ್ರೋಲ್ ತೆಗೆದುಕೊಂಡಿದ್ದು, 10 ರೂಪಾಯಿ ಕಡಿಮೆ ಕೊಟ್ಟಿದ್ದಕ್ಕೆ ಬಂಕ್ ಸಿಬ್ಬಂದಿ ರವಿ ಹಾಗೂ ಮಹೇಶ ನಡುವೆ ಜಗಳ ಆರಂಭವಾಗಿದೆ.

Fight over Rs 10 Man brutally murdered

ಆಗ ಜೊತೆಗಿದ್ದ ನಾಗರಾಜ್ ಹಾಗೂ ಕೊಲೆಗೀಡಾದ ಮೇಘನಾಥ್ ಜಗಳ ಬಿಡಿಸಲು ಮುಂದಾಗಿದ್ದಾರೆ.ಈ ಸಂದರ್ಭದಲ್ಲಿ ಆರೋಪಿಗಳು ಮೇಘನಾಥ್ ಮೇಲೆ ಗಂಭೀರ ಹಲ್ಲೆ ನಡೆಸಿದ್ದರು. ಹೀಗಾಗಿ ತೀವ್ರ ಗಾಯಗೊಂಡ ಮೇಘನಾಥ್‌ನನ್ನು ರಾಯಚೂರಿನ ಬಾಲಂಕು ಆಸ್ಪತ್ರೆಗೆ ದಾಖಲಿಸಿ ತಲೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.ಆದರೆ ಬೆಳಗ್ಗೆ 8.25ರ ಸುಮಾರಿಗೆ ಆತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.ಇನ್ನು ಇಡಪನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ,ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share with Friends
author avatar
Digital Desk