Blogಕೋಲಾರ-Kolaraರಾಜ್ಯ-Karnataka

ಮುಳಬಾಗಿಲು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜನರ ಗೋಳು ಕೇಳೋರ್ಯಾರು..?

ಮುಳಬಾಗಿಲು : ಮುಳಬಾಗಿಲು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ದಲ್ಲಿ ಸೌಲಭ್ಯ ಕೊರತೆ ಜೊತೆ ನಿಲ್ದಾಣದಲ್ಲಿ ಕುಡುಕರು, ಕಳ್ಳರ ಹಾವಳಿ ಹೆಚ್ಚಾಗಿದ್ದು ಜನ ಪರದಾಡುವಂತಾಗಿದೆ.

ಬಸ್ ನಿಲ್ದಾಣದಲ್ಲಿ ಖಾಸಗಿ ದ್ವಿಚಕ್ರ ವಾಹನಗಳ ಹಾವಳಿ ಹೆಚ್ಚಾಗಿದ್ದು ಬಸ್ ನಿಲ್ದಾಣದಲ್ಲಿ ಶುದ್ಧ ನೀರಿನ ಸೌಲಭ್ಯ ಇಲ್ಲ, ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಇಲ್ಲ, ಬಸ್ ನಿಲ್ದಾನದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಲ್ಲ, ಹೈ ಮಾಸ್ಟ್ ಲೈಟ್ ಗಳು ಹಾಳಾಗಿದ್ದು ರಾತ್ರಿ ಸಮಯದಲ್ಲಿ ನಿಲ್ದಾಣಕ್ಕೆ ಬಸ್ ಗಳೇ ಬರಲ್ಲ..

ನಗರದ ಹೃದಯ ಭಾಗದಲ್ಲಿ ಕಳೆದ 10 ವರ್ಷಗಳ ಹಿಂದೆ ಚಿಕ್ಕ ಸ್ಥಳದಲ್ಲಿ ನಿರ್ಮಾಣಗೊಂಡಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣವು ಮೂಲ ಸೌಲಭ್ಯದಿಂದ ವಂಚಿತಗೊಂಡಿದ್ದು ಎಲ್ಲಾ ಸೌಲಭ್ಯಗಳಿರುವ ಹೈಟೆಕ್ ಬಸ್ ನಿಲ್ದಾಣ ಅನಿವಾರ್ಯವಾಗಿದೆ.

2013 ಪ್ರೆಬ್ರವರಿ 9ರಂದು ಅಂದಿನ ಶಾಸಕರಾದ ಅಂಬರೀಶ್ ಶಂಕುಸ್ಥಾಪನೆ ನೆರವೇರಿಸಿದರು. ಆದರೆ ಇದುವರೆಗೂ ಕೂಡ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಪೂರ್ತಿಯಾಗಿ ಕಾಮಗಾರಿ ಮುಕ್ತಾಯವಾಗಿಲ್ಲ. ಮುಳಬಾಗಿಲು ತಾಲೂಕಿನಲ್ಲಿ ಸುಮಾರು 343 ಗ್ರಾಮಗಳಿದ್ದು 283 ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

ನಾಮಫಲಕಗಳ ಕೊರತೆ.
ಕೋಲಾರ, ಕೆಜಿಫ್, ಶ್ರೀನಿವಾಸಪುರ, ಸೇರಿದಂತೆ ರಾಜ್ಯದ ಬೆಂಗಳೂರು, ಆಗುಂಬೆ,ಧರ್ಮಸ್ಥಳ, ತಿರುಪತಿ, ಮಂತ್ರಾಲಯ, ತೀರ್ಥಹಳ್ಳಿ, ಸಿಗಂದೂರು, ಹುಬ್ಬಳಿ, ಶೃಂಗೇರಿ, ಮತ್ತು ವರ ರಾಜ್ಯದ ಪುಂಗನೂರು, ಪಲಮನೇರು, ಚಿತ್ತೂರು,ವಿಕೋಟ,ರಾಮಸಮುದ್ರಂ ಸೇರಿದಂತೆ ವಿವಿಧ ಕಡೆಗೆ ನಿತ್ಯ ಬಸ್ ಸಂಚಾರವಿದೆ. ಈ ಬಸ್ ಗಳ ಸಂಚಾರದ ವಿವರವನ್ನು ಜನರಿಗೆ ತಿಳಿಸಲು ಈಗಾಗಲೇ ಎರಡು ಎಲ್. ಇ. ಡಿ. ಅಳವಡಿಸಲಾಗಿದ್ದು ಮತ್ತೆರಡು ನಾಮಫಲಕಗಳನ್ನು ಅಳವಡಿಸಿಬೇಕಾಗಿದೆ.

ವಿಶ್ರಾಂತಿ ಕೊಠಡಿ ಇಲ್ಲ :
ನಿತ್ಯ ಸುಮಾರು 45 ರಿಂದ 50 ಸಾವಿರ ಪ್ರಯಾಣಿಕರು ಸಾರಿಗೆ ಬಸ್ ಗಳಲ್ಲಿ ಸಂಚರಿಸುತ್ತಾರೆ. ಆದರೂ ಚಿಕ್ಕ ಮಕ್ಕಳಿಗೆ ಹಾಲು ಕುಡಿಸಲು ವಿರಾಮ ಕೊಠಡಿಯಿಲ್ಲ. ಕುಳಿತು ವಿಶ್ರಾಂತಿ ಪಡೆಯಲು ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳು ಇಲ್ಲವಾಗಿದೆ.

ರಾತ್ರಿ ಬಸ್ಸುಗಳೇ ಬರಲ್ಲ.. :
ಬಸ್ ನಿಲ್ದಾನಕ್ಕೆ ಮುಂಜಾನೆ 5 ಗಂಟೆಯಿಂದ ಬಸ್ ಗಳ ಆಗಮನವಾದರೆ ರಾತ್ರಿ 10 ಗಂಟೆ ಮೇಲೆ ನಿಲ್ದಾಣ ತಟಸ್ಥವಾಗುತ್ತದೆ.ರಾತ್ರಿ 10 ಗಂಟೆ ನಂತರ. ಬಸ್ ನಿಲ್ದಾಣಕ್ಕೆ ಬಸ್ಸುಗಳೇ ಬರಲ್ಲ. ಬೆಂಗಳೂರು ಟು ತಿರುಪತಿ ಹೈವೇದಲ್ಲೇ ಹೋಗುವಂತಹ ಸನ್ನಿವೇಶ ಉಂಟಾಗಿದೆ.

ಸಿಸಿ ಕ್ಯಾಮೆರಾ ಇಲ್ಲ..
ಹೊರ ರಾಜ್ಯಗಳಿಂದ ಪ್ರಯಾಣಿಕರು ಭೇಟಿ ನೀಡುವುದರಿಂದ ನಿಲ್ದಾಣದಲ್ಲಿ ಜನಸಂದನೆ ಹೆಚ್ಚಾಗಿದೆ ಇದೆ ಅವಕಾಶ ಬಲಿಸಿಕೊಳ್ಳುತ್ತಿರುವ ಕಳ್ಳರು ಆಗಾಗ ತಮ್ಮ ಕೈಚಳಕವನ್ನು ತೋರಿಸುತ್ತಿದ್ದಾರೆ.

ಖಾಸಗಿ ಬಸ್ಸುಗಳ ಕಾರುಬಾರು..
ಕೆ ಎಸ್ ಆರ್ ಟಿ ಸಿ ನಿಲ್ದಾಣದ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಖಾಸಗಿ ಬಸ್ ನಿಲುಗಡೆಗೆ ಅವಕಾಶವಿಲ್ಲ. ಆದರೆ ಕಳೆದ ಮೂರು ತಿಂಗಳಿಂದ ಮುರಳಿ ಐಸ್ ಕ್ರೀಮ್ ಮುಂಭಾಗ ಖಾಸಗಿ ಬಸ್ಸುಗಳ ನಿಲ್ದಾಣವಾಗಿದೆ. ಈ ಕೂಡಲೇ ತಾಲೂಕಿನ ಅಧಿಕಾರಿಗಳು ಜಿಲ್ಲಾಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತವಾದ ಕ್ರಮಗಳನ್ನು ಕೈಗೊಂಡು ಪ್ರಯಾಣಿಕರಿಗೂ ಹಾಗೂ ಶಾಲಾ ಮಕ್ಕಳಿಗೆ ಉತ್ತಮವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡಬೇಕಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಪ್ರಯಾಣಿಕರು ತಿಳಿಸಿದರು.

ವರದಿ : ಅರುಣ್ ಕುಮಾರ್ ಬಿ ಎಸ್

Share with Friends
author avatar
News Desk