Crime NewsLatestಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

Kidnap Case ಗೆ ಟ್ವಿಸ್ಟ್; ಯಾರೂ ಬಲವಂತವಾಗಿ ಕರೆದೊಯ್ದಿಲ್ಲ, ಕಿಡ್ನ್ಯಾಪ್ ಮಾಡಿಲ್ಲ: ಸಂತ್ರಸ್ತೆ ಸ್ಪೋಟಕ ಹೇಳಿಕೆ

ಬೆಂಗಳೂರು: ಕೆ.ಆರ್ ನಗರದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD.Revanna) ವಿರುದ್ಧ ದಾಖಲಾಗಿದ್ದ ಕಿಡ್ನ್ಯಾಪ್ ಪ್ರಕರಣದ (Kidnap Case) ಸಂತ್ರಸ್ತೆಯ ಹೇಳಿಕೆ ವಿಡಿಯೋ (Vedio) ವೈರಲ್ ಆಗಿದೆ.

ನಾಪತ್ತೆಯಾಗಿದ್ದ ಸಂತ್ರಸ್ತೆಯ ಹೇಳಿಕೆಯ ವಿಡಿಯೋ ಏಕಾಏಕಿ ಬಹಿರಂಗಗೊಂಡಿದೆ. ವಿಡಿಯೋದಲ್ಲಿ ಸಂತ್ರಸ್ತೆ, ನನ್ನನ್ನು ಯಾರೂ ಬಲವಂತವಾಗಿ ಕರೆದೊಯ್ದಿಲ್ಲ. ನನ್ನನ್ನ ಯಾರೂ ಕಿಡ್ನ್ಯಾಪ್ ಮಾಡಿಲ್ಲ. ನಾನೇ ಸಂಬಂಧಿಕರ ಮನೆಗೆ ಹೋಗಿದ್ದೆ. ನನ್ನ ಮಗ ಏನೂ ಗೊತ್ತಿಲ್ಲದಂತೆ ದೂರು ಕೊಟ್ಟಿದ್ದಾನೆ ಎಂದಿದ್ದಾರೆ. ಇದನ್ನೂ ಓದಿ: ಇಂದು ಹೆಚ್‌ಡಿ ರೇವಣ್ಣ ಬೇಲ್ ಅರ್ಜಿ ವಿಚಾರಣೆ … ಜೈಲಾ ಬೇಲಾ?

https://youtu.be/lAoWpSgCBCs?si=H9H39H_IxVYGYtg4

ಭವಾನಿ ಅಕ್ಕ, ರೇವಣ್ಣ ಆಗ್ಲಿ, ಪ್ರಜ್ಜು ಅಣ್ಣ ಆಗ್ಲಿ ಅವರಿಂದ ನಮಗೇನೂ ತೊಂದ್ರೆ ಇಲ್ಲ. ನಮ್ಮಿಂದ ಅವರಿಗೂ ತೊಂದ್ರೆ ಇಲ್ಲ. ಬಾಬಣ್ಣ ಇರಲಿ, ಯಾರೂ ಏನೂ ತೊಂದ್ರೆ ಮಾಡಿಲ್ಲ. ನಮಗೆ ಯಾವುದೇ ರೀತಿ ತೊಂದರೆ ಇಲ್ಲ.ಆದರೆ ಚೆನ್ನಾಗಿ ನೋಡ್ಕಂಡೆ ಕಳುಹಿಸಿದ್ದಾರೆ. ಈ ಮೊಬೈಲ್ ವೀಡಿಯೋಗೆ ನಮಗೆ ಸಂಬಂಧವೇ ಇಲ್ಲ. ನನ್ನನ್ನ ಯಾರೂ ಅಪಹರಿಸಿಯೂ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಂದಿನ 5 ದಿನ ರಾಜ್ಯದಲ್ಲಿ ಮಳೆ ಸಾಧ್ಯತೆ

ಊರಲ್ಲೆಲ್ಲಾ ಹಿಂಗೆ ಮಾತಾಡ್ತಿದ್ದಕ್ಕೆ ಬೇಜಾರಾಗಿ ಸಂಬಂಧಿಕರ ಮನೆಯಲ್ಲಿ ನಾಲ್ಕು ದಿನ ಕಾಲ ಕಳೆದುಕೊಂಡು ಬರೋಣ ಅಂತಾ ಹೋದೆ. ಆದರೆ ಇವತ್ತು ಟಿವಿ ನೋಡಬೇಕಾದ್ರೆ ಗೊತ್ತಾಯ್ತು. ಈ ತರ ಎಲ್ಲಾ ಮಾಡ್ತಿದ್ದಾರೆ ಅಂತ. ಅದನ್ನ ನೋಡಿ ಯಾಕಪ್ಪ ಹೀಗೆಲ್ಲಾ ಮಾಡಿದ್ರು ಅಂತ ಯೋಚನೆ ಬಂತು. ಆದ್ರೆ ಯಾವ ತೊಂದ್ರೆನೂ ಈಗ ಇಲ್ವಲ್ಲ. ಯಾಕ್ ಹೀಗೆ ಮಾಡ್ತಿದ್ದಾರೆ. ಅಂತ ನಾನೇ ವಿಡಿಯೋ ಮಾಡಿಸಿದೆ. ಇದನ್ನೂ ಓದಿ: ಟೈಯರ್ ಬ್ಲಾಸ್ಟ್ ಆಗಿ ಕ್ರೂಸರ್ ಪಲ್ಟಿ -ಮೂವರು ಮಹಿಳೆಯರ ದಾರುಣ ಸಾವು

https://youtu.be/Huo-fB975OQ?si=8N3qxmry6vbxUKQW

ನನ್ನ ಮಗನಾದ್ರೂ ಅಷ್ಟೇ ಏನೂ ಭಯ ಪಡಬೇಡ, ಚೆನ್ನಾಗಿ ಇದ್ದಿನಿ. ಬರ್ತಿನಿ ಎರಡು ದಿವಸದೊಳಗೆ. ಏನೂ ತೊಂದ್ರೆ ಆಗೋದಿಲ್ಲ ಚೆನ್ನಾಗಿದ್ದೀನಿ. ಯಾರೇ ಏನೇ ಅಂದರೂ ತಲೆಗೆ ಹಾಕಿಕೊಳ್ಳಬೇಡ ಎಂದು ಪುತ್ರನಿಗೆ ಅಭಯ ನೀಡಿದ್ದಾರೆ. ಇದನ್ನೂ ಓದಿ: ಕೆಎಎಸ್ ಅಧಿಕಾರಿಯ ಪತ್ನಿ, ಹೈಕೋರ್ಟ್ ವಕೀಲೆ ಆತ್ಮಹತ್ಯೆಗೆ ಶರಣು

ನಾವೂ ಕೂಲಿ ಮಾಡಿಕೊಂಡು ಜೀವನ ಸಾಗಿಸೋರು. ನಮ್ಮ ಹೊಟ್ಟೆ ಮೇಲೆ ಹೊಡಿಬೇಡಿ. ನೆಮ್ಮದಿಯಿಂದ ಕೂಲಿ ಮಾಡಿಕೊಂಡು ಇದೀವಿ ಬಿಟ್ಟುಬಿಡಿ. ನಮ್ಮ ಗಂಡನಿಗೆ ಯಾರಿಗೆ, ಏನೇ ಆದ್ರೂ ನೀವೇ ಹೊಣೆ ಎಂದು ಪೊಲೀಸ್ ಅಧಿಕಾರಿಗಳ ವಿರುದ್ಧ ಸಂತ್ರಸ್ತೆ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಹೆಣ್ಣು ಮಗುವೆಂದು ಮಾತ್ರೆ ಸೇವಿಸಿ ಗರ್ಭಪಾತ

https://youtu.be/PsNwh7YFS5Y?si=0JXSXUkuVR6XgePA
Share with Friends
author avatar
News Desk