Latestಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

ಇಂದು ಹೆಚ್‌ಡಿ ರೇವಣ್ಣ ಬೇಲ್ ಅರ್ಜಿ ವಿಚಾರಣೆ … ಜೈಲಾ ಬೇಲಾ?

ಬೆಂಗಳೂರು: ಮಾಜಿ ಸಚಿವ ಹೆಚ್‌ಡಿ ರೇವಣ್ಣರ (HD. Revanna) ಜಾಮೀನು (Bail) ಅರ್ಜಿ ಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ಕೆಆರ್ ನಗರದ ಮಹಿಳೆ ಅಪಹರಣ ಕೇಸ್‌ನಲ್ಲಿ ಬಂಧಿತರಾಗಿರುವ ರೇವಣ್ಣ ಅವರು ಪರಪ್ಪನ ಜೈಲಿನಲ್ಲಿ (Parappna Agrahara Jail) 5 ದಿನ ಕಳೆದಿದ್ದಾರೆ. 5 ನೆ ದಿನ ಕಳೆದು 6 ನೆ ದಿನಕ್ಕೆ ಕಾಲಿಟ್ಟಿದ್ದು, ಇಂದು ಅವರ ಜಾಮೀನು ಅರ್ಜಿ ಕೋರ್ಟ್ನಲ್ಲಿ (Court) ವಿಚಾರಣೆಗೆ ಬರಲಿದೆ.

ಸದ್ಯ ರೇವಣ್ಣ ಅವರಿಗೆ ಜಾಮೀನದ್ದೇ ಜಪವಾಗಿದೆ. ಬೇಲ್ ಸಿಗಲಿ ಎಂದು ಸಚಿವ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ದೆವರ ಮೇಲೆ ಭಾರ ಹಾಕಿರುವೆ. ದೇವರ ಪ್ರಾಸದದಂತೆ ಜಾಮೀನು ಸಿಗಬಹುದು ಎಂದು ಜೀಳು ಸಿಬ್ಬಂದಿ ಬಳಿ ಹೇಳಿದ್ದಾರೆ.ಇದನ್ನೂ ಓದಿ: ಮುಂದಿನ 5 ದಿನ ರಾಜ್ಯದಲ್ಲಿ ಮಳೆ ಸಾಧ್ಯತೆ

https://youtu.be/Huo-fB975OQ?si=lxZ974CzKckgBk8G

ದೇವರಾಜೇಗೌಡಗೂ ಇಂದೇ ಜಾಮೀನು ಸಿಗುತ್ತಾ?
ಹೊಳೆನರಸಿಪುರ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಆರೆಸ್ಟ್ ಆಗಿರುವ ಬಿಜೆಪಿ ಮುಖಂಡ, ವಕೀಲ ದೇವರಾಜೆಗೌಡ ಅವರಿಗೆ ಮೊನ್ನೆಯಷ್ಟೇ 14 ದಿನಗಳ ನ್ಯಾಯಾಂಗ ಬಂಧನವ್ನನು ಕೋರ್ಟ್ ನೀಡಿದೆ. ಬಳಿಕ ಪೊಲೀಸರು ಕಸ್ಟಡಿಗೆ ಕೇಳಿದ್ದು, ಓಪನ್ ಕೋರ್ಟ್ನಲ್ಲಿ ಕಸ್ಟಡಿಗೆ ಕೇಳುವಂತೆ ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಪೊಲೀಶರು ಕಸ್ಟಡಿಗೆ ಕೇಳಲಿದ್ದಾರೆ. ಇದನ್ನೂ ಓದಿ: ಟೈಯರ್ ಬ್ಲಾಸ್ಟ್ ಆಗಿ ಕ್ರೂಸರ್ ಪಲ್ಟಿ -ಮೂವರು ಮಹಿಳೆಯರ ದಾರುಣ ಸಾವು

https://youtu.be/lAoWpSgCBCs?si=H9H39H_IxVYGYtg4

ಜೊತೆಗೆ ದೇವರಾಜೇಗೌಡ ಬೇಲ್ ಅರ್ಜಿ ಸಲ್ಲಿಸಿದ್ದು, ನಾಳೆ ವಿಚಾರಣೆಗೆ ಬರುವ ಸಾಧ್ಯೆತೆ ಇದೆ. ಹೀಗಾಗಿ ಇವತ್ತು ದೇವರಾಜೇಗೌಡರಿಗೀಊ ಜಾಮೀನು ಸಿಗುತ್ತಾ ಅಥವಾ ಜೈಲೇ ಗತಿಯಾಗುತ್ತಾ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಕೆಎಎಸ್ ಅಧಿಕಾರಿಯ ಪತ್ನಿ, ಹೈಕೋರ್ಟ್ ವಕೀಲೆ ಆತ್ಮಹತ್ಯೆಗೆ ಶರಣು

Share with Friends
author avatar
News Desk