Latestರಾಜಕೀಯ | Politicsರಾಜ್ಯ-Karnataka

ಭವಾನಿ ರೇವಣ್ಣಗೆ ಬಂಧನದ ಭೀತಿ – ಹೆಚ್‌ಡಿಕೆ ಮೊದಲ ಪ್ರತಿಕ್ರಿಯೆ

ಬೆಂಗಳೂರು: ಭವಾನಿ ರೇವಣ್ಣ ಅವರ ಪ್ರಕರಣದ ಕುರಿತು ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ನೋಟಿಸ್‌ ಕೊಟ್ಟರೂ ಎಸ್‌ಐಟಿ ವಿಚಾರಣೆಗೆ (SIT Investigation) ಹಾಜರಾಗಿಲ್ಲ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಜವಾಬ್ದಾರಿ ಮುಗಿದಿದೆ. ಇನ್ನುಳಿದ ಜವಾಬ್ದಾರಿ ಎಸ್‌ಐಟಿ ಹಾಗೂ ನ್ಯಾಯಾಲಯದ ಹೆಗಲ ಮೇಲಿದೆ. ನಾವು ಯಾವುದಕ್ಕೂ ಹಸ್ತಕ್ಷೇಪ ಮಾಡಲ್ಲ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮಳೆಗಾಲ ಆರಂಭ – ಹೆಚ್ಚಾದ ಹಾವುಗಳ ಕಾಟ

https://youtu.be/yT8_wXTi9wQ?si=h6epTvnriUQ8zhIj

ಪ್ರಜ್ವಲ್‌ ರೇವಣ್ಣ ವಿಚಾರದಲ್ಲೂ ನಮ್ಮ ಜವಾಬ್ದಾರಿ ಮುಗಿದಿದೆ. ವಿದೇಶದಿಂದ ಬಂದು ತನಿಖೆ ಎದುರಿಸುವಂತೆ ನಾನೂ ಹೇಳಿದ್ದೆ, ದೇವೇಗೌಡರೂ ಸಹ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದರು. ಇನ್ನೇನಿದ್ದರು ಅದರ ಜವಾಬ್ದಾರಿ ಎಸ್‌ಐಟಿ ಮತ್ತು ಕೋರ್ಟ್‌ಗೆ ಸೇರಿದ್ದು ಎಂದು ಉತ್ತರಿಸಿದ್ದಾರೆ. ಕೆ.ಆರ್ ನಗರ ಮಹಿಳೆ ಅಪಹರಣ ಪ್ರಕರಣದಲ್ಲಿ (KR Nagara Victim Kidnap Case) ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು (Anticipatory Bail) ಅರ್ಜಿ ಇತ್ತೀಚೆಗಷ್ಟೇ ವಜಾಗೊಂಡಿದ್ದು ಯಾವುದೇ ಕ್ಷಣದಲ್ಲಿ ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ದೆಹಲಿ ಮದ್ಯ ಹಗರಣ – ಬಿಆರ್‌ಎಸ್ ನಾಯಕಿ ಕವಿತಾ ನ್ಯಾಯಾಂಗ ಬಂಧನ ಜುಲೈ 3 ವರೆಗೆ ವಿಸ್ತರಣೆ

https://youtu.be/r32NMq7j5QU?si=271E1L406n0K-dEt

ಇದೇ ವೇಳೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಕುರಿತು ಮಾತನಾಡಿದ ಅವರು, ಎಸ್ಟಿ ಸಮುದಾಯದ ಹಣವನ್ನ ತೆಲಂಗಾಣದ ಚುನಾವನೆಗೆ ಬಳಸಿದ್ದೀರಾ? ಯಾವ ತನಿಖೆ ಮಾಡಿ ಯಾರ ಮೇಲೆ ಆಕ್ಷನ್ ತಗೊತೀರಾ ಸಿದ್ದರಾಮಯ್ಯ ಅವರೇ? ನಾಚಿಕೆ ಆಗಬೇಕು, ದುಡ್ಡು ದರೋಡೆ ಮಾಡಿ ಹೆಗ್ಗಣ ತಿನ್ನೋ ಕೆಲಸ ಮಾಡ್ತಿದ್ದೀರಿ ಎಂದು ಲೇವಡಿ ಮಾಡಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ, ಎಲ್ಲಾ ಬೋರ್ಡ್‌ಗಳಲ್ಲಿ ನಡೆದಿರುವ ಹಗರಣಗಳ ಬಗ್ಗೆ ತನಿಖೆ ಮಾಡಿಸಲಿ ಎಂದು ಸವಾಲ್‌ ಹಾಕಿದ್ದಾರೆ. ಇದನ್ನೂ ಓದಿ: ಒಡಿಶಾದಲ್ಲಿ ಹೆಚ್ಚಿದ ತಾಪಮಾನ – ಹೀಟ್‌ಸ್ಟ್ರೋಕ್‌ಗೆ 20 ಮಂದಿ ಸಾವು

Share with Friends
author avatar
News Desk