LatestWeatherಬೆಂಗಳೂರು-Bengaluruರಾಜ್ಯ-Karnataka

ರಾಜ್ಯದಲ್ಲಿ ಮಳೆಗಾಲ ಆರಂಭ – ಹೆಚ್ಚಾದ ಹಾವುಗಳ ಕಾಟ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರು (Bengaluru) ಸೇರಿ ರಾಜ್ಯದಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ (Rain) . ನಿನ್ನೆ ಸುರಿದ ಮಳೆಯಿಂದಾಗಿ ನಗರದಲ್ಲಿ ಹಲವಾರು ಅವಾಂತರಗಳು ಸೃಷ್ಟಿಯಾಗಿದೆ.

ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿದ್ದು, ಮಳೆಯಿಂದಾಗಿ ಜನರು ಪರದಾವಂತಾಗಿದೆ. ಭಾರೀ ಗುಡುಗು, ಗಾಳಿ ಸಹಿತ ಬಿಸಿದ ಮಳೆಗೆ ಮರಗಳು ಮತ್ತು ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಇದನ್ನೂ ಓದಿ: ಗ್ರಾಹಕರಿಗೆ ಶಾಕ್‌ – ಇಂದಿನಿಂದ ಹಾಲಿನ ದರ ಹೆಚ್ಚಳ

https://youtu.be/yT8_wXTi9wQ?si=55DW_B6PdqB9dKB5

ಇದೇ ಹೊತ್ತಲ್ಲಿ ಸಿಟಿ ಮಂದಿಗೆ ಹಾವುಗಳ ಸಂಚಾರ ಶುರುವಾಗಿದೆ. ಹಾವುಗಳ ಸಂತಾನೋತ್ಪತ್ತಿ ಕಾಲ ಹಿನ್ನೆಲೆ ಹಾವುಗಳ ಸಂಚಾರ ಶುರುವಾಗಿದ್ದು, ಏಕಾಎಕಿ ಮನೆಗಳಲ್ಲಿ ಪ್ರತ್ಯಕ್ಷವಾಗುತ್ತಿವೆ. ಇದನ್ನೂ ಓದಿ: ದೆಹಲಿಯಿಂದ ಮುಂಬೈಗೆ ಹೊರಟಿದ್ದ ಆಕಾಶ ವಿಮಾನಕ್ಕೆ ಬಾಂಬ್‌ ಬೆದರಿಕೆ

https://youtu.be/r32NMq7j5QU?si=KRpwJMzXHT2kahzU

ನಗರದ ಹಲವು ಪ್ರದೇಶದಲ್ಲಿ ಮನೆಯೊಳಗೆ ಹಾವು ಪ್ರತ್ಯಕ್ಷವಾಗಿದೆ ಎಂದು ಪಾಲಿಕೆ ವನ್ಯ ಜೀವಿ ಸಂರಕ್ಷಣಾ (Wildlife Coversation) ತಂಡ ಮಾಹಿತಿ ನೀಡಿದೆ. ಬೊಮ್ಮನಹಳ್ಳಿ, ಬ್ಯಾಟರಾಯನಪುರ, ದಾಸರಹಳ್ಳಿ ಕಡೆ ಹಾವುಗಳ ಹಾವಳಿ ಇದೆ. ಇದನ್ನೂ ಓದಿ: ಮಗಳ ಪ್ರೇಮ ವಿವಾಹಕ್ಕೆ ಮನನೊಂದು ತಾಯಿ ನೇಣಿಗೆ ಶರಣು

Share with Friends
author avatar
News Desk