Crime NewsLatestTop Storiesರಾಷ್ಟ್ರೀಯ-National

ವಯನಾಡು ಭೂಕುಸಿತ ದುರಂತ,ಸತ್ತವರ ಸಂಖ್ಯೆ 6ಕ್ಕೆ ಏರಿಕೆ

ವಯನಾಡು,(ಕೇರಳಂ)ಜು.9: ವಯನಾಡಿನ ಕಳ್ಳಾಡಿ ಬಳಿ ಸಂಭವಿಸಿದ ಭೂಕುಸಿತದ ಸ್ಥಳದಿಂದ ಇಂದು ಇನ್ನೂ ಮೂವರ ಶವಗಳನ್ನು ಹೊರತೆಗೆದಿದ್ದು, ಈ ಮೂಲಕ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.


ಮೃತರನ್ನು ಉತ್ತರ ಪ್ರದೇಶದ ಸರ್ವೇಯರ್ ಅಜರುದ್ದೀನ್ ಅನ್ಸಾರಿ, ಹಿಮಾಚಲ ಪ್ರದೇಶದ ಎಂಜಿನಿಯರ್ ರಾಹುಲ್ ಶರ್ಮಾ ಮತ್ತು ಬಿಹಾರದ ಜೆಸಿಬಿ ಆಪರೇಟರ್ ಮೊಹಮ್ಮದ್ ಇಮ್ರಾನ್ ಎಂದು ಗುರುತಿಸಲಾಗಿದೆ.
ಇದೇ ವೇಳೆ ಘಟನೆ ಬಗ್ಗೆ ಮಾಹಿತಿ ನೀಡಿರುವ ಕೇರಳ ಸಚಿವರಾದ ಎ.ಪಿ. ಅನಿಲ್ ಕುಮಾರ್ ಮತ್ತು ಟಿ. ಸಿದ್ದಿಕ್ ಅವರು ಕಾರ್ಯಾಚರಣೆ ವಲಯ-1 ರಿಂದ ಒಂದು ಶವ ಪತ್ತೆಯಾಗಿದೆ ಹಾಗೂ ಇನ್ನೊಂದು ಶವ ನದಿಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದರು.


ಇದಲ್ಲದೆ, ಘಟನೆ ನಡೆದ ವಲಯ-1 ಮತ್ತು 2 ರ ಜೊತೆಗೆ ನದಿಯ ಬಳಿಯೂ ಶೋಧ ಕಾರ್ಯಾಚರಣೆ ನಡೆಸಲಾಗುವುದು ಎಂದು ಸಚಿವ ಅನಿಲ್ ಕುಮಾರ್ ಸ್ಪಷ್ಟಪಡಿಸಿದರು.
ಅಂದ ಹಾಗೇ ವಯನಾಡ್ ಮತ್ತು ಕೋಝಿಕೋಡ್ ಜಿಲ್ಲೆಗಳ ನಡುವಿನ ಸಂಪರ್ಕವನ್ನು ಸುಧಾರಿಸುವ ಉದ್ದೇಶದಿಂದ ನಿರ್ಮಿಸಲಾಗುತ್ತಿದ್ದ ಅನಕ್ಕೊಂಪೊಯಿಲ್-ಮೆಪ್ಪಾಡಿ ಸುರಂಗ ಯೋಜನೆಯ ನಿರ್ಮಾಣ ಸ್ಥಳದಲ್ಲಿ ಜು.7 ರಂದು ಈ ಭೂಕುಸಿತ ಸಂಭವಿಸಿತ್ತು.

Share with Friends
author avatar
Digital Desk