Blog

ದೀಪಾವಳಿ ಸಂಭ್ರಮಾಚರಣೆ ; ರಾಯಭಾರ ಕಚೇರಿ ಕುಣಿದು ಕುಪ್ಪಳಿಸಿದ ಅಮೆರಿಕ ರಾಯಭಾರಿ

ನವದೆಹಲಿ: ಭಾರತದಲ್ಲಿನ ಅಮೆರಿಕ ರಾಯಭಾರಿ ಕಚೇರಿಯಲ್ಲಿ ದೀಪಾವಳಿ ಹಬ್ಬವನ್ನು ಬುಧವಾರ ಅದ್ಧೂರಿಯಾಗಿ ಆಚರಿಸಲಾಯಿತು. ಸಂಭ್ರಮಾಚರಣೆಯಲ್ಲಿ ಅಮೆರಿಕಾದ ರಾಯಭಾರಿ ಎರಿಕ್​ ಗಾರ್ಸೆಟ್ಟಿ ಮತ್ತೊಮ್ಮೆ ತಮ್ಮ ನೃತ್ಯ ಪ್ರದರ್ಶನದ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಹಬ್ಬದ ಸಂಭ್ರಮಾಚರಣ ವೇಳೆ ರಾಯಭಾರ ಕಚೇರಿಯನ್ನು ಸುಂದರವಾಗಿ ಅಲಂಕರಿಸಲಾಗಿತ್ತು.

ಈ ದೀಪಾವಳಿ ಆಚರಣೆಯು ಭಾರತೀಯ ಸಂಸ್ಕೃತಿಗೆ ಗೌರವ ಮಾತ್ರವಲ್ಲ, ಎರಡು ದೇಶಗಳ ನಡುವಿನ ಆಳವಾದ ಸ್ನೇಹ ಮತ್ತು ಸಾಂಸ್ಕೃತಿಕ ವಿನಿಮಯದ ಉದಾಹರಣೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಖತ್​ ಕ್ರೇಜ್​ ಹುಟ್ಟಿಹಾಕಿರುವ ‘ತೌಬಾ ತೌಬಾ’ ಹಿಂದಿ ಹಾಡಿಗೆ ರಾಯಭಾರಿ ಎರಿಕ್​ ಗಾರ್ಸೆಟ್ಟಿ ಅವರು ಡ್ಯಾನ್ಸ್​​ ಮಾಡಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ.

ಎರಿಕ್ ಗಾರ್ಸೆಟ್ಟಿ ಕಳೆದ ವರ್ಷ ಮೇ ತಿಂಗಳಲ್ಲಿ ನೇಮಕವಾದಾಗಿನಿಂದ ಭಾರತೀಯ ಸಂಪ್ರದಾಯಗಳನ್ನು ಹೃದಯಪೂರ್ವಕವಾಗಿ ಆಚರಿಸುತ್ತಾರೆ. ಚಿತ್ತರಂಜನ್ ಪಾರ್ಕ್‌ನಲ್ಲಿ ದುರ್ಗಾ ಪೂಜೆಯನ್ನು ಉತ್ಸಾಹದಿಂದ ಆಚರಿಸಿದರು. ಕಳೆದ ವರ್ಷದ ದೀಪಾವಳಿ ಹಬ್ಬದ ಆಚರಣೆ ವೇಳೆ ಎರಿಕ್​ ಗಾರ್ಸೆಟ್ಟಿ ಅವರು ಹಿಟ್ ಹಾಡು ‘ಚೈಯ್ಯಾ ಚೈಯಾ’ಗೆ ನೃತ್ಯ ಮಾಡಿದ್ದರು.

ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರು ಶ್ವೇತಭವನದಲ್ಲಿ ಸೋಮವಾರ ದೀಪಾವಳಿ ಆಚರಣೆಯನ್ನು ಆಯೋಜಿಸಿದ್ದರು. ಈ ಸಮಾರಂಭದಲ್ಲಿ 600ಕ್ಕೂ ಹೆಚ್ಚು ಪ್ರಸಿದ್ಧ ಭಾರತೀಯ ಅಮೆರಿಕನ್ನರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

Share with Friends
author avatar
News Desk