ಹುಟ್ಟುಹಬ್ಬದ ಕುರಿತು ಅಭಿಮಾನಿಗಳಲ್ಲಿ ಯಶ್ ಮನವಿ
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅವರು ಈ ಬಾರಿಯ ಹುಟ್ಟುಹಬ್ಬಕ್ಕೆ ತಮ್ಮ ಅಭಿಮಾನಿಗಳೊಂದಿಗೆ ಇರೋದಿಲ್ಲ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ಹಂಚಿಕೊಂಡಿದ್ದು. ಸಿನಿಮಾ ಶೂಟಿಂಗ್ ಇರುವುದರಿಂದ ತಾವು ಊರಿನಲ್ಲಿ ಇರೋದಿಲ್ಲ ಎಂದು ತಿಳಿಸಿದ್ದಾರೆ.
ಜನವರಿ 08ಕ್ಕೆ ನಟ ಯಶ್ ಅವರ ಹುಟ್ಟುಹಬ್ಬವಿದ್ದು. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನ ಹುಟ್ಟಹಬ್ಬವನ್ನು ಆಚರಿಸಲು ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದ್ದರು. ಆದರೆ ಇದರ ನಡುವೆ ನಟ ಯಶ್ ಅವರ ಈ ನಡೆ ಅವರ ಅಭಿಮಾನಿಗಳಿಗೆ ಕೊಂಚ ಇರಿಸು ಮುರಿಸು ಉಂಟು ಮಾಡುವ ಸಾಧ್ಯತೆ ಇದೆ.

ಕಳೆದ ವರ್ಷ ಯಶ ಹುಟ್ಟುಹಬ್ಬದಂದು ಅಭಿಮಾನಿಯೊಬ್ಬ ಬ್ಯಾನರ್ ಕಟ್ಟುವ ವೇಳೆ ಕರೆಂಟ್ ಶಾಕ್ ತಗುಲಿ ಸಾವನ್ನಪ್ಪಿದ್ದ. ಈ ಘಟನೆಯಿಂದ ನಟ ಯಶ್ ಕೂಡ ಸಾಕಷ್ಟು ದುಃಖಿತರಾಗಿದ್ದರು. ಅಂದು ಸಾವನ್ನಪ್ಪಿದ್ದ ಅಭಿಮಾನಿಯ ಮನೆಗೆ ಭೇಟಿ ನೀಡಿದ ಯಶ್ ಅವರ ಕುಟುಂಬಕ್ಕೆ ಸಾತ್ವಾಂನ ಹೇಳಿ. ಮುಂದೆ ಯಾರೂ ಸಹ ಇಂತಹ ಕಾರ್ಯಕ್ಕೆ ಕೈ ಹಾಕದಂತೆ ಕೋರಿಕೊಂಡಿದ್ದರು.
ಇಂದು ಅವರು ಬರೆದಿರುವ ಪತ್ರದಲ್ಲಿಯೂ ಅವರ ಕಳಕಳಿ ಎದ್ದು ಕಾಣುತ್ತಿದ್ದು. ಫ್ಲೆಕ್ಸ್, ಬ್ಯಾನರ್ನಂತಹ ಆಡಂಬರದ ಆಚರಣೆಗೆ ಕೈ ಹಾಕದೆ. ನಿಮ್ಮ ಕುಟುಂಬ ಹೆಮ್ಮೆ ಪಡುವಂತ ಕೆಲಸ ಮಾಡಿ. ಅದೇ ನೀವು ನನಗೆ ಕೊಡುವ ದೊಡ್ಡ ಉಡುಗೊರೆ ಎಂದು ತಮ್ಮ ಪತ್ರದಲ್ಲಿ ಬರೆದುಕೊಂಡಿದ್ದಾರೆ.
