BlogLatestರಾಜ್ಯ-Karnataka

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಅಗ್ಯತವಿಲ್ಲ : ಪರಮೇಶ್ವರ್

ಬೆಂಗಳೂರು : ಪ್ರಿಯಾಂಕ್ ಖರ್ಗೆ ಹೆಸರಿಗೆ ಗೆ ಮಸಿ ಬಳಿಯುವ ಯತ್ನ ಆಗುತ್ತಿದೆ. ಸಚಿವರು ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಲ್ಲಿ ಮಾತಾಡಿದ ಅವರು, ಗುತ್ತಿಗೆದಾರ ಸಚಿನ್ ಸೂಸೈಡ್ ಕೇಸ್ ಗೂ ಪ್ರಿಯಾoಕ್ ಖರ್ಗೆ ಗೂ ಸಂಬಂಧ ಇಲ್ಲ. ಇದನ್ನ ರಾಜಕೀಯ ಕಾರಣಕ್ಕೆ ಬಿಜೆಪಿ ಬಳಸಿಕೊಳ್ತಿದೆ. ಈ ಬಗ್ಗೆ CID ತನಿಖೆ ಮಾಡಿಸುತ್ತೇವೆ ಎಂದು ಹೇಳಿದರು.

ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಎಲ್ಲಾ ಪ್ರಕರಣಗಳನ್ನ ಸಿಬಿಐ ತನಿಖೆಗೆ ಕೊಡಲು ಆಗಲ್ಲ. ನಮ್ಮ ಸಿಐಡಿ ಸಮರ್ಥವಾಗಿದೆ. ಬಿಜೆಪಿ ಅನಗತ್ಯ ಗೊಂದಲ ಸೃಷ್ಠಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಬಿಜೆಪಿ ಅನಾವಶ್ಯಕ ಅಪಾದನೆ ಮಾಡಲಾಗುತ್ತಿದೆ. ಸಚಿನ್ ಡೆತ್ ನೋಟ್ ನಲ್ಲಿ ಪ್ರಿಯಾoಕ್ ಖರ್ಗೆ ಹೆಸರಿಲ್ಲ. ಎಲ್ಲಾ ಕೇಸ್ ಗಳನ್ನ ಸಿಬಿಐ ನೀಡಲಾಗಲ್ಲ. ಎಲ್ಲದರಲ್ಲಿಯೂ ರಾಜಕೀಯ ತರವಲ್ಲ ಎಂದು ತಿಳಿಸಿದರು.

ಸಕಾರಾತ್ಮಕ ಟೀಕೆಗೆ ಸ್ವಾಗತ ಇದೆ. ಎಲ್ಲದರಲ್ಲಿಯೂ ಹುಳುಕು ಹುಡುಕುವುದು ತಪ್ಪು. ಕೇಸರಿ ನಾಯಕರು ಟೀಕೆ ಟಿಪ್ಪಣಿ ಮಾಡುವುದನ್ನ ನಿಲ್ಲಿಸಬೇಕು ಎಂದು ಹೇಳಿದರು

Share with Friends
author avatar
News Desk