Crime NewsLatestಬೆಳಗಾವಿ-Belagaviರಾಜ್ಯ-Karnataka

ಅತ್ತೆಯ ಕಾಟ ತಡೆಯಲಾರದೆ ಯೋಧನ ಪತ್ನಿ ಆತ್ಮಹತ್ಯೆಗೆ ಶರಣು

ಚಿಕ್ಕೋಡಿ : ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಯೋಧರೊಬ್ಬರ ಪತ್ನಿ (Soldier Wife) ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ((Belagavi) ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ನಡೆದಿದೆ.

ರೂಪಾಬಾಯಿ ಬಾಳು ರೂಪನವರ (31) ಆತ್ಮಹತ್ಯೆ ಮಾಡಿಕೊಂಡವರು. ಮೃತಳ‌ ಪತಿ ಬಾಳು ರೂಪನವರ ಅವರು ಅರುಣಾಚಲಪ್ರದೇಶ ಗ್ಯಾಂಟುಕನಲ್ಲಿ ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಒಂದೂವರೆ ವರ್ಷದ ಹಿಂದೆ ಕಳವಾಗಿದ್ದ 2 ಸೀಮೆ ಹಸುಗಳು- 1.70 ಲಕ್ಷ ಮೌಲ್ಯದ ಗೋವುಗಳು ಪತ್ತೆ

https://youtu.be/ivtrR5vC0N8?si=40IZSn3X7vmRLMe7

ಅತ್ತೆ ಸೇವಂತಾ ಸಿದರಾಯ ರೂಪನವರ ಅವರಿಂದ ರೂಪಾಬಾಯಿ ಕಿರಿಕಿರಿ ಅನುಭವಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದ ಮನನೊಂದು ಅವರು ಆತ್ಮಹತ್ಯೆ ದಾರಿ ಹಿಡಿದಿರುವುದಾಗಿ ಮೃತಳ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ರೂಪಾಬಾಯಿ ಪತಿ ಹಾಗೂ ತನ್ನ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇದನ್ನೂ ಓದಿ: ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ರಾಜೀನಾಮೆ ಕೊಟ್ಟ ಸಿಕ್ಕಿಂ ಸಿಎಂ ಪತ್ನಿ

https://youtu.be/scaejbJlrAQ?si=KYB_msFT3dUMSoqC

ಈ ಸಂಬಂಧ ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಡಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಜೂನ್​ 26ರಂದು ಲೋಕಸಭಾ ಸ್ಪೀಕರ್ ಚುನಾವಣೆ- ​ 25ರವರೆಗೆ ಬೆಂಬಲ ಪತ್ರ ಸಲ್ಲಿಕೆಗೆ ಅವಕಾಶ

https://youtu.be/MqYiVxcb02I?si=htl3CaPMNNpNZZHX
Share with Friends
author avatar
News Desk