Latestರಾಜ್ಯ-Karnatakaರಾಷ್ಟ್ರೀಯ-National

ಮೋದಿಯವರ ಮಿಡ್‌ ನೈಟ್‌ ವಿಡಿಯೋ ಸಂದೇಶಕ್ಕೆ ರಾಹುಲ್‌ ಹಾಗೂ ಖರ್ಗೆ ತೀವ್ರ ಆಕ್ರೋಶ..!

ನವದೆಹಲಿ: ನೀಟ್ ಅಕ್ರಮದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಡರಾತ್ರಿ ಹಂಚಿಕೊಂಡ ವಿಡಿಯೋ ಸಂದೇಶಕ್ಕೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ಮಧ್ಯರಾತ್ರಿ ವಿಡಿಯೋ ಮಾಡುವ ಮೂಲಕ ದೇಶದ ಲಕ್ಷಾಂತರ ಯುವಕರ ಭಾವನೆಗಳ ಜೊತೆ ಚೆಲ್ಲಾಟವಾಡಬೇಡಿ ಮತ್ತು ಅವರನ್ನು ಅವಮಾನಿಸಬೇಡಿ” ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ನೀಟ್ ಹಗರಣದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಧಾನಿ ಮೋದಿಯವರ ವಿಡಿಯೋಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ ಮಲ್ಲಿಕಾರ್ಜುನ ಖರ್ಗೆ, “ಮೋದಿ ಜೀ, ಸಂಸತ್ತಿನ ಹೊರಗೆ ನಿಮ್ಮ ‘ಮನ್ ಕಿ ಬಾತ್’ ಮಾಡುವುದನ್ನು ಬಿಟ್ಟು, ಸಂಸತ್ತಿನ ಸದನದ ಒಳಗಡೆ ಬಂದು ಅಧಿಕೃತವಾಗಿ ಹೇಳಿಕೆ ನೀಡಿ,” ಎಂದು ಸವಾಲು ಹಾಕಿದ್ದಾರೆ.
“ನೀವು ಸಂಸತ್‌ಗೆ ಬರುವ ಮುನ್ನವೇ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದ ರಾಜೀನಾಮೆ ಪಡೆಯಿರಿ ಅಥವಾ ಅವರನ್ನು ತಕ್ಷಣ ಸಚಿವ ಸಂಪುಟದಿಂದ ವಜಾಗೊಳಿಸಿ,” ಎಂದು ಖರ್ಗೆ ಆಗ್ರಹಿಸಿದ್ದಾರೆ.
​ನೀಟ್ ವಿಚಾರದಲ್ಲಿ ಪ್ರಧಾನಿಯವರ ತಡರಾತ್ರಿಯ ವಿಡಿಯೋ ಸಂದೇಶವು ಇದೀಗ ವಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿದ್ದು, ರಾಜಕೀಯ ವಲಯದಲ್ಲಿ ಕಾವು ಮತ್ತಷ್ಟು ಏರಿದೆ

Share with Friends
author avatar
Digital Desk