Crime NewsEntertainmentLatestಬಳ್ಳಾರಿ-Ballary

ಬಳ್ಳಾರಿಯಲ್ಲಿ ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ- ಓರ್ವ ಸಾವು 10 ಕ್ಕೂ ಹೆಚ್ಚು ಮಂದಿಗೆ ಗಾಯ

ಬಳ್ಳಾರಿ: ನಿಂತಿದ್ದ ಲಾರಿಗೆ ಟೆಂಪೋ ಟ್ರಾಕ್ಸಿ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ್ದು, 10 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ವಿಜಯನಗರ (Vijayanagar) ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಕ್ರಾಸ್ ನ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದಿದೆ.

ಕೃಷ್ಟಪ್ಪ(62) ಮೃತ ದುರ್ದೈವಿ. ಅಪಘಾತದಲ್ಲಿ 10 ಜನಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದೆ. ಇದನ್ನೂ ಓದಿ:ಬೆಂಗಳೂರಿನಲ್ಲಿ ಡೆಂಘಿ ಪ್ರಕರಣ ಹೆಚ್ಚಳ- ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಹೈ ವೋಲ್ಟೇಜ್ ಮೀಟಿಂಗ್

https://youtu.be/DF5yh4qa8x8?si=o2Fg9QtUjMaJcxmX

ಕಲುಬುರಗಿಯಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು ಚಿಕ್ಕಬಳ್ಳಾಪುರದ ಆರೋಡಿ ಗ್ರಾಮಕ್ಕೆ ತೆರಳುತ್ತಿದ್ದರು. ಟಿಟಿಯೊಳಗೆ ಇಬ್ಬರು ಮಕ್ಕಳು ಸೇರಿದಂತೆ 16 ಜನ ಪ್ರಯಾಣಿಸುತ್ತಿದ್ದರು. ಈತ್ತ ಗಂಗಾವತಿಯಿಂದ ಮೈಸೂರಿಗೆ ತೆರಳುತ್ತಿದ್ದ ಲಾರಿ ಕೆಟ್ಟು ನಿಂತಿತ್ತು. ಹೀಗೆ ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ ಹೊಡೆದಿದೆ.

https://youtu.be/zS4AFQA1fH8?si=JvXT-H9YxPHchaJ4

ಡಿಕ್ಕಿ ರಭಸಕ್ಕೆ ಟಿಟಿ ನಜ್ಜು- ಗುಜ್ಜಾಗಿದ್ದು, ಇಬ್ಬರು ಸಿಲುಕಿಕೊಂಡಿದ್ದರು. ಪ್ರಕರಣ ಕುರಿತು ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾಫಿನಾಡಲ್ಲಿ ಮುಂದುವರೆದ ಮಳೆ ಅಬ್ಬರ- ಮಲೆನಾಡಿನ ಜನರ ಜೀವನ ಅಸ್ತವ್ಯಸ್ತ

Share with Friends
author avatar
News Desk