Crime NewsLatestTop Storiesಬೆಂಗಳೂರು-Bengaluruರಾಜ್ಯ-Karnataka

ಗ್ರಾಮ ಪಂಚಾಯ್ತಿಯಲ್ಲಿ ಅವ್ಯವಹಾರ: ಒಟ್ಟಾದ ಬಿಜೆಪಿ, ಕಾಂಗ್ರೆಸ್​ ಸದಸ್ಯರು ​

ಬೆಂಗಳೂರು: ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಕ್ಷೇತ್ರದಲ್ಲೇ ಗ್ರಾಮ ಪಂಚಾಯ್ತಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಸದಸ್ಯರು ಒಂದಾಗಿ ಅಧ್ಯಕ್ಷ ಸ್ಥಾನಕ್ಕೆ ಕೋಕ್ ನೀಡಿದ್ದಾರೆ.

ಕಂದಾಯ ಸಚಿವ ಕೃಷ್ಣಬೈರೆಗೌಡ ಅವರು ಪ್ರತಿನಿಧಿಸುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ (Byatarayanapura Assembly Constituency) ಬರುವ ಬೆಂಗಳೂರು (Bengaluru) ನಗರ ಜಿಲ್ಲೆಯ ಉತ್ತರ ತಾಲೂಕಿನ ಬಾಗಲೂರು ಗ್ರಾಮ ಪಂಚಾಯಿತಿ ಶ್ರೀಮಂತ ಪಂಚಾಯಿತಿ ಎಂದು ಹೆಸರಾಗಿದೆ. ಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

https://youtu.be/3EjLAOOE9Ss?si=l_2YIgFjIBvFN8iK

ಈ ಗ್ರಾಮ ಪಂಚಾಯ್ತಿಯಲ್ಲಿ ಬಾಗಲೂರು ಗ್ರಾಮ ಪಂಚಾಯ್ತಿಯಲ್ಲಿ ರೀತಿ ಮುನೇಗೌಡ ಕಳೆದ ಒಂದು ವರ್ಷದಿಂದ ಅಧ್ಯಕ್ಷರಾಗಿದ್ದರು. ಪತ್ನಿ ಅಧ್ಯಕ್ಷೆಯಾಗಿದ್ದು, ಪತಿ ಮುನೇಗೌಡ ಸದಸ್ಯರಾಗಿದ್ದಾರೆ. ದಂಪತಿ ವಿರುದ್ಧ ಅಧಿಕಾರ ದುರ್ಬಳಕೆ ಮತ್ತು ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಮುಡಾ ಹಗರಣ: ಮೈಸೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು

ವಾಟರ್ ಪಿಲ್ಟರ್, ಬೀದಿ ದೀಪ, ರಸ್ತೆ, ಚರಂಡಿ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ. ನೀರಿನ ಬಿಲ್​ಗಳನ್ನು ಸಹ ಪಂಚಾಯ್ತಿಗೆ ನೀಡದೆ ಗುಳುಂ ಮಾಡಿದ್ದಾರೆ. ಈ ಹಿಂದೆ ಜಿಯೋ ಕೇಬಲ್​ನಲ್ಲಿ ಸದಸ್ಯ ಮುನೆಗೌಡ 60 ಲಕ್ಷ ರೂ. ಗುಳುಂ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ.

https://youtu.be/zgiyhkjn7M8?si=dRyAEz0HildtA8UW

ಈ ಅವ್ಯವಹಾರದಿಂದ ಬೇಸತ್ತ 26 ಸದಸ್ಯರ ಪೈಕಿ 20 ಜನರು ಬೆಂಗಳೂರು ಉತ್ತರ ಎಸಿ ಪ್ರಮೋದ್ ಪಾಟೀಲ್ ಮುಂದೆ ಅವಿಶ್ವಾಸ ನಿರ್ಣಯ ಮಂಡಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿದ್ದಾರೆ. ಜೊತೆಗೆ ಅವ್ಯವಹಾರದ ವಿರುದ್ಧ ತನಿಖೆ ನಡೆಸುವಂತೆಯು ಎಸಿ ಮತ್ತು ಡಿಸಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ -ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿದ್ದು ನಿಜ: ಡಿಕೆ ಶಿವಕಮಾರ್

ಕಂದಾಯ ಸಚಿವ ಕೃಷ್ಣಬೈರೆಗೌಡ ಪ್ರತಿನಿಧಿಸುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಬಾಗಲೂರು ಗ್ರಾಮ ಪಂಚಾಯ್ತಿಗೆ ಪ್ರತಿವರ್ಷ ಕೋಟಿ ಕೋಟಿ ಆದಾಯ ಬರುತ್ತದೆ. ಈ ಗ್ರಾಮ ಪಂಚಾಯಿತಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಏರೋಸ್ಪೇಸ್ ಡಿಪೇನ್ಸ್ ಪಾರ್ಕ್ ಪಕ್ಕದಲ್ಲಿದೆ. ಇದನ್ನೂ ಓದಿ:ಬರ್ತಡೇ ದಿನವೇ ಸಾವಿಗೀಡಾದ ಕಾಲೇಜು ವಿದ್ಯಾರ್ಥಿನಿ

https://youtu.be/Z9guiREBeLU?si=8WzgIuBBsu4EygBO
Share with Friends
author avatar
News Desk