ವಾರದ ನಂತರ ಮತ್ತೆ ಮಂತ್ರಿ ಮಾಲ್ ಓಪನ್; ಕೋರ್ಟ್ ಸೂಚನೆಯಂತೆ ಬೀಗ ತೆಗೆದ ಬಿಬಿಎಂಪಿ
ಬೆಂಗಳೂರು: ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆ ಕಳೆದ ಶುಕ್ರವಾರ ಬಂದ್ ಮಾಡಲಾಗಿದ್ದ ಮಂತ್ರಿಮಾಲ್ ( Mantri Mall) ಒಂದು ವಾರದ (One Week) ನಂತರ ಇಂದು ಮತ್ತೆ ಓಪನ್ (open) ಆಗಿದೆ. ಬಿಬಿಎಂಪಿಗೆ (BBMP) ಮಾಲ್ ತೆರೆಯುವಂತೆ ಹೈ ಕೋರ್ಟ್ ಸೂಚನೆ ನೀಡಿದ್ದು ಆದರಂತೆ ಮಾಲ್ ಓಪನ್ ಮಾಡಲಾಗಿದೆ.
ಸುಮಾರು 50 ಕೋಟಿ ರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು ಈ ಪೈಕಿ 20 ಕೋಟಿ ರೂ.ಗಳನ್ನ ಜುಲೈ 31 ರೊಳಗೆ ಪಾವತಿಸುವುದಾಗಿ ಮುಚ್ಚಳಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಾಲ್ ತೆರೆಯಲು ಸೂಚನೆ ನೀಡಲಾಗಿದೆ. 250ಕ್ಕೂ ಅಧಿಕ ಮಳಿಗೆ ಹಾಗೂ ವ್ಯಾಪಾರ ಹಿನ್ನೆಲೆಯಲ್ಲಿ ಹೈ ಕೊರ್ಟ್ (High Court) ಬಿಬಿಎಂಪಿಗೆ ಮಾಲ್ ತೆರೆಯುವಂತೆ ಸೂಚನೆ ನೀಡಿದೆ. ಇದನ್ನೂ ಓದಿ: ಬಂಧನಕ್ಕೆ ತೆರಳಿದ್ದಾಗ ಪೊಲೀಸರ ಮೇಲೆ ಹಲ್ಲೆ ಆರೋಪಿಗೆ ಗುಂಡೇಟು
ಬಿಬಿಎಂಪಿಗೆ ಬರೋಬ್ಬರಿ 50 ಕೋಟಿ ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆ ಮಾಲ್ ಮಾಲೀಕರಿಗೆ ಮೇ.10ರ ಶುಕ್ರವಾರ ಅಕ್ಷಯ ತೃತೀಯದ ದಿನವೇ ಪಾಲಿಕೆ ಅಧಿಕಾರಿಗಳು ಶಾಕ್ ಕೊಟ್ಟಿದ್ದರು. ಈ ಹಿಂದೆ ಹಲವು ಬಾರಿ ಎಚ್ಚರಿಕೆ ಕೊಟ್ಟರೂ ಬಾಕಿ ತೆರಿಗೆ ಪಾವತಿಸದ ಮಾಲ್ ಗೆ ಎಂಟನೇ ಬಾರಿಗೆ ಪಾಲಿಕೆ ಬೀಗ ಹಾಕಿತ್ತು. ಇದನ್ನೂ ಓದಿ: ಅರ್ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್! ಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ
ಬೆಳಗ್ಗೆಯೇ ಮಾಲ್ ಗೆ ಬೀಗ ಹಾಕಿದ ಅಧಿಕಾರಿಗಳು, ಮರ್ಷಲ್ ಗಳನ್ನ ಕಾವಲಿಗಿಟ್ಟಿದ್ದರು. ಎಂದಿನಂತೆ ಕೆಲಸಕ್ಕೆ ಬಂದ ಮಾಲ್ ಸಿಬ್ಬಂದಿ ದಿಢೀರ್ ಅಂತಾ ಮಾಲ್ ಬಂದ್ ಆಗಿದ್ದರಿಂದ ರಸ್ತೆಯಲ್ಲೇ ಕಾದುನಿಂತಿದ್ರು. ಮಾಲ್ ಗೆ ಬೀಗ ಬಿದ್ದಿದ್ದಕ್ಕೆ ಕಂಗಾಲಾದ ಸಿಬ್ಬಂದಿ, ಪದೇ ಪದೇ ಹೀಗೆ ಮಾಲ್ ಬಂದ್ ಆದ್ರೆ ನಮ್ಮ ಕಥೆಯೇನು, ಮಾಲ್ ನಲ್ಲಿರುವ ನಮ್ಮ ಸ್ಟಾಲ್ ಗಳ ಮಾಲೀಕರು ಏನ್ ಮಾಡೋದು ಅಂತಾ ಬೇಸರ ತೋಡಿಕೊಂಡಿದ್ದರು. ಸದ್ಯ ಒಂದು ವಾರದ ಬಳಿಕ ಇಂದು ಮಂತ್ರಿ ಮಾಲ್ ಮತ್ತೆ ಓಪನ್ ಆಗಿದೆ. ಇದನ್ನೂ ಓದಿ: ಬಿಹಾರದಲ್ಲಿ ಶಾಲೆ ಪಕ್ಕದ ಚರಂಡಿಯಲ್ಲಿ 4 ವರ್ಷದ ಬಾಲಕನ ಶವ ಪತ್ತೆ
ಸದ್ಯ ಒಂದು ವಾರದ ನಂತರ ಮಾಲ್ ಓಪನ್ ಆದ ಖೂಷಿಯಲ್ಲಿ ಜನರು ಎಂದಿನಂತೆ ಶಾಪಿಂಗ್ ಮಾಡಲು ಬಂದಿದ್ದಾರೆ. ಮಾಲ್ನ ಎಲ್ಲಾ ಮಳೆಗಗಳು ಮತ್ತೆ ಓಪನ್ ಆಗಿದ್ದು, ಎಂದಿನಂತೆ ಸಿಬ್ಬಂದಿ ಕೆಲಸಕ್ಕೆ ಬಂದಿದ್ದಾರೆ. ಇದನ್ನೂ ಓದಿ: ರಾಖಿ ಸಾವಂತ್ ಆರೋಗ್ಯದ ಬಗ್ಗೆ ಆಸ್ಪತ್ರೆಯಿಂದ ಸ್ಪಷ್ಟನೇ
