Crime NewsLatestರಾಷ್ಟ್ರೀಯ-National

ಬಿಹಾರದಲ್ಲಿ ಶಾಲೆ ಪಕ್ಕದ ಚರಂಡಿಯಲ್ಲಿ 4 ವರ್ಷದ ಬಾಲಕನ ಶವ ಪತ್ತೆ

ಪಾಟ್ನಾ: ಶಾಲೆಯೊಂದರ (School) ಪಕ್ಕದಲ್ಲಿರುವ ಚರಂಡಿಯಲ್ಲಿ (Drainage) ನಾಲ್ಕು ವರ್ಷದ ಬಾಲಕನ ಶವ ಪತ್ತೆಯಾಗಿರುವ ಘಟನೆ ಬಿಹಾರದಲ್ಲಿ (Bihar) ನಡೆದಿದೆ.

ಮೃತ ಮಗುವನ್ನು ದಿಘಾದ ರಾಮ್‌ಜಿ ಚಾಕ್ ನಿವಾಸಿ ಶೈಲೇಂದ್ರ ರೈ ಅವರ ಪುತ್ರ ಆಯುಷ್ ಕುಮಾರ್ (4) ಎಂದು ಗುರುತಿಸಲಾಗಿದೆ. ಶಾಲೆ ಮಗಿದ ಬಳಿಕ ಸಂಜೆಯಾದರೂ ಮಗು ಮನೆಗೆ ಬಾರದ ಹಿನ್ನಲೆ ಪ್ರಾಂಶುಪಾಲರಿಗೆ ಕರೆ ಮಾಡಿದ್ದಾರೆ. ಬಳಿಕ ಶಾಲಾ ವಾಹನ ಚಾಲಕನನ್ನು ಕರೆಸಿ ವಿಚಾರಣೆ ನಡೆಸಿದ್ದಾಗ ಆತ 6.30ಕ್ಕೆ ಎಲ್ಲಾ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿದ್ದೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ರಾಖಿ ಸಾವಂತ್ ಆರೋಗ್ಯದ ಬಗ್ಗೆ ಆಸ್ಪತ್ರೆಯಿಂದ ಸ್ಪಷ್ಟನೇ

https://youtu.be/LNSDz2Tze1s?si=83faJphIq-nXDbD8

ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಯುಷ್ ಶಾಲೆಯಲ್ಲಿ ಕಾಣಿಸಿಕೊಂಡಿದ್ದಾನೆ. ಅದಾದ ಬಳಿಕ ನಾಪತ್ತೆಯಾಗಿದ್ದ. ಮಗುವನ್ನು ಶಾಲೆಯಲ್ಲೇ ಕೊಲೆ ಮಾಡಿ ಚರಂಡಿಗೆ ಎಸೆದಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಇದರಿಂದಾಗ ಕೋಪಗೊಂಡ ಪೋಷಕರು ಮತ್ತು ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆಗಳು ನಡೆಸುತ್ತಿದ್ದಾರೆ. ಇದನ್ನೂ ಓದಿ: ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನೇಪಾಳದಲ್ಲಿ ನಿಷೇಧ

ರಸ್ತೆಯಲ್ಲಿ ಟೈರ್‌ಗಳನ್ನು ಸುಟ್ಟು ತೀವ್ರ ಪ್ರತಿಭಟನೆ ನಡೆಸಿದರು. ಸಿಟ್ಟಿಗೆದ್ದ ಜನರು ಶಾಲೆಗೆ ನುಗ್ಗಿ ಧ್ವಂಸ ಮಾಡಿದ್ದಾರೆ. ಅಷ್ಟೇ ಅಲ್ಲ ಶಾಲೆಯ ಹಲವು ಕೊಠಡಿಗಳಿಗೂ ಬೆಂಕಿ ಹಚ್ಚಲಾಗಿದೆ. ಶಾಲಾ ವಾಹನಗಳಿಗೂ ಹಾನಿಯಾಗಿದ್ದು, ಸಂಚಾರ ವ್ಯವಸ್ಥೆ ಸಂಪರ‍್ಣ ಅಸ್ತವ್ಯಸ್ತಗೊಂಡಿದೆ. ಬೆಳಗ್ಗೆ ಈ ಮರ‍್ಗವಾಗಿ ಸಂಚರಿಸುವ ಜನರು, ಇತರೆ ಶಾಲೆಗಳ ಮಕ್ಕಳು, ಶಿಕ್ಷಕರು ಸಹ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಇದನ್ನೂ ಓದಿ: “A” ಚಿತ್ರ ಮರುಬಿಡುಗಡೆ; ಉಪ್ಪಿ ಚಿತ್ರಕ್ಕೆ ಅಭಿಮಾನಿಗಳಿಂದ ಮತ್ತೆ ಸ್ವಾಗತ

ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸುತ್ತಿದ್ದಾರೆ . ಸದ್ಯ ಪೊಲೀಸರು ಜನರ ಮನವೊಲಿಸುವ ಮೂಲಕ ಸಮಾಧಾನಪಡಿಸಲು ಪ್ರಯತ್ನಿಸಿದರು. ಇದನ್ನೂ ಓದಿ: ಮುಂಬೈ ಬಿಲ್ ಬೋರ್ಡ್ ದುರಂತ – ಜಾಹೀರಾತು ಕಂಪನಿಯ ಮಾಲೀಕ ಬಂಧನ

ಹಂತಕನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ, ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ರಾವಾನಿಸಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ಸ್ಪಷ್ಟವಾಗಲಿದೆ. ಈ ವಿಚಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 3 ದಿನ ಭಾರೀ ಮಳೆಯಾಗುವ ಸಾಧ್ಯತೆ

https://youtu.be/dowiMBv6QX0?si=LS1FFhFGFTpvDJjG
Share with Friends
author avatar
News Desk