Crime NewsLatestಚಿಕ್ಕಬಳ್ಳಾಪುರ-Chikkaballapuraರಾಜ್ಯ-Karnataka

ಬಂಧನಕ್ಕೆ ತೆರಳಿದ್ದಾಗ ಪೊಲೀಸರ ಮೇಲೆ ಹಲ್ಲೆ ಆರೋಪಿಗೆ ಗುಂಡೇಟು

ಚಿಕ್ಕಬಳ್ಳಾಪುರ: ಬಂಧನಕ್ಕೆ (Arrest) ತೆರಳಿದ್ದಾಗ ಪೊಲೀಸ್ ಪೇದೆಯೊಬ್ಬರ (Police Constabel) ಮೇಲೆ ಹಲ್ಲೆ ನಡೆಸಿದ ಕೊಲೆ ಆರೋಪಿಯ (Crminial) ಕಾಲಿಗೆ ದೊಡ್ಡಬಳ್ಳಾಪುರ ಪೊಲೀಸರು ಗುಂಡೇಟು (Shoot) ನೀಡಿದ್ದಾರೆ.

ಹೇಮಂತ್ ಗೌಡ ಎಂಬವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿ ಯಲಹಂಕ ಬಳಿಯ ಶ್ರೀರಾಮನ ಹಳ್ಳಿ ಬಳಿ ಅಡಗಿರುವ ಖಚಿತ ಮಾಹಿತಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ಸಿಕ್ಕಿತ್ತು. ಮಾಹಿತಿ ಮೇರೆಗೆ ಆತನನನು ಬಂಧಿಸಲು ಇಂದು ಮುಂಜಾನೆ ಪೊಲೀಸರು ತೆರಳಿದ್ದರು. ಆಗ ಆರೋಪಿ ಪೊಲೀಸ್‌ ಪೇದೆ ಚಂದ್ರು ಎಂಬರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಇದನ್ನೂ ಓದಿ: ಅರ್​ಸಿಬಿ ಅಭಿಮಾನಿಗಳಿಗೆ ಗುಡ್​ ನ್ಯೂಸ್​! ಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ

https://youtu.be/dowiMBv6QX0?si=kEiPSvh4Lt3JbOVS

ಈ ವೇಳೆ ಪೊಲೀಸರು ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಆರೋಪಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್‌ ಸಾಧಿಕ್ ಪಾಶ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದು, ಬಳಿಕ ಆತನನ್ನು ಬಂಧಿಸಿದ್ದಾರೆ. ಗಾಯಗೊಂಡಿರುವ ಪೊಲೀಸ್ ಪೇದೆ ಚಂದ್ರು ಹಾಗೂ ಆರೋಪಿ ಶ್ರೀನಿವಾಸ್‍ಗೆ ದೊಡ್ಡಬಳ್ಳಾಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಬಿಹಾರದಲ್ಲಿ ಶಾಲೆ ಪಕ್ಕದ ಚರಂಡಿಯಲ್ಲಿ 4 ವರ್ಷದ ಬಾಲಕನ ಶವ ಪತ್ತೆ

https://youtu.be/691bSA9TYE0?si=8Gw5cVfYZqyncSrM

ಮೇ 11ರಂದು ದೊಡ್ಡಬಳ್ಳಾಪುರ ನಗರ ಹೊರವಲಯದ ಭಾಷೆಟ್ಟಳ್ಳಿ ಬಳಿ ಇರುವ ಬಾರ್ & ರೆಸ್ಟೋರೆಂಟ್ ಮುಂಭಾಗ ಹೇಮಂತ್ ಗೌಡ ಎಂಬ ಯುವಕನನ್ನು ನರಸಿಂಹಮರ‍್ತಿ, ಶ್ರೀನಿವಾಸ್ ಹಾಗೂ ಇತರರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಕೊಲೆಗೆ ಎರಡು ಗುಂಪುಗಳ ನಡುವಿನ ದ್ವೇಷ ಕಾರಣ ಎನ್ನಲಾಗಿತ್ತು. ಪ್ರಕರಣ ಸಂಬಂಧ ಆರೋಪಿ ನರಸಿಂಹಮರ‍್ತಿಯನ್ನು ಈಗಾಗಲೇ ಬಂಧಿಸಲಾಗಿದೆ. ಇದನ್ನೂ ಓದಿ: ರಾಖಿ ಸಾವಂತ್ ಆರೋಗ್ಯದ ಬಗ್ಗೆ ಆಸ್ಪತ್ರೆಯಿಂದ ಸ್ಪಷ್ಟನೇ

Share with Friends
author avatar
News Desk