Crime NewsEntertainmentLatestರಾಷ್ಟ್ರೀಯ-National

ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ ಆರೋಪದಲ್ಲಿ ಬಿಜೆಪಿ ನಾಯಕ – ಪಕ್ಷದಿಂದ ಉಚ್ಚಾಟನೆ

ಡೆಹ್ರಾಡೂನ್: ಹರಿದ್ವಾರದಲ್ಲಿ ನಡೆದ 13 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಉತ್ತರಾಖಂಡದ ಬಿಜೆಪಿ (BJP) ನಾಯಕ ಆದಿತ್ಯ ರಾಜ್ ಸೈನಿ (Aditya Raj Saini) ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಅಲ್ಲದೇ ಹಿಂದುಳಿದ ವರ್ಗಗಳ ಆಯೋಗದ ನಾಮನಿರ್ದೇಶಿತ ಸದಸ್ಯರಾಗಿರುವ ಸೈನಿಯವರನ್ನು ಆ ಹುದ್ದೆಯಿಂದಲೂ ತೆಗೆದುಹಾಕಲಾಗಿದೆ.

ಮೂರು ದಿನಗಳ ಹಿಂದೆ ಬಾಲಕಿ ನಾಪತ್ತೆಯಾಗಿದ್ದಳು. ಆಕೆಯ ಶವ ಮಂಗಳವಾರ ಪತಂಜಲಿ ಸಂಶೋಧನಾ ಕೇಂದ್ರದ ಬಳಿಯ ಬಹದ್ರಾಬಾದ್ ಪ್ರದೇಶದ ಹೆದ್ದಾರಿಯಲ್ಲಿ ಪತ್ತೆಯಾಗಿತ್ತು. ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಇದನ್ನೂ ಓದಿ: ಶೈಕ್ಷಣಿಕ ವರ್ಷ ಆರಂಭ ಬೆನ್ನಲ್ಲೇ ಬಸ್​ಗೆ ಬರ- ರಸ್ತೆಗಿಳಿದ ವಿದ್ಯಾರ್ಥಿಗಳು

https://youtu.be/UkXo0Q1YsZ8?si=Fi2BWTZd_iVo_lkh

ಬಿಜೆಪಿ ನಾಯಕ ಮತ್ತು ಆತನ ಸಹಚರರಿಂದ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಮೃತ ಬಾಲಕಿಯ ಕುಟುಂಬದವರು ಸೈನಿ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿದ ಬಳಿಕ ಅವರನ್ನು ಬಂಧಿಸಲಾಗಿದೆ.. ಇದನ್ನೂ ಓದಿ: ಜಮ್ಮು ಕಾಶ್ಮೀರದ ದೋಡಾದಲ್ಲಿ ಇಬ್ಬರು ಉಗ್ರರ ಎನ್‌ಕೌಂಟರ್‌

https://youtu.be/97Xqp_kxIBQ?si=7f3PaSRJ2hVd47Xw

ಬಾಲಕಿ ಜೂ.24 ರಂದು ಸಂಜೆ ಮನೆಗೆ ಬಾರದ ಹಿನ್ನೆಲೆ, ಆಕೆಯ ಫೋನ್‍ಗೆ ಕುಟುಂಬಸ್ಥರು ಕರೆ ಮಾಡಿದ್ದರು. ಬಿಜೆಪಿ ಮುಖಂಡರು ಕರೆ ಸ್ವೀಕರಿಸಿ, ಬಾಲಕಿ ತಮ್ಮೊಂದಿಗೆ ಇದ್ದಾರೆ ಎಂದು ಹೇಳಿದ್ದರು ಎಂದು ಬಾಲಕಿಯ ಕುಟುಂಬಸ್ಥರು ಹೇಳಿದ್ದಾರೆ. . ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ – ನಾಲ್ವರು ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್

Share with Friends
author avatar
News Desk