
ದುಷ್ಕರ್ಮಿಗಳಿಂದ ಅಡಿಕೆ ಸಸಿಗಳು ನಾಶ..!
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಚನ್ನಬಸವಪ್ಪ ಎಂಬ ರೈತರಿಗೆ ಸೇರಿದ 80 ಅಡಿಕೆ ಸಸಿಗಳನ್ನು ದುಷ್ಕರ್ಮಿಗಳು ಬುಧವಾರ ರಾತ್ರೋರಾತ್ರಿ ಕಡಿದು ಹಾಕಿ ನಾಶಪಡಿಸಿದ್ದಾರೆ
ಸ್ಥಳ : ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ದುಗುಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ 80 ಅಡಿಕೆ ಸಸಿಗಳನ್ನು ದುಷ್ಕರ್ಮಿಗಳು ಬುಧವಾರ ರಾತ್ರೋರಾತ್ರಿ ಕಡಿದು ಹಾಕಿ ನಾಶಪಡಿಸಿದ್ದಾರೆ.ಬೇಟೆ ರಂಗನಹಳ್ಳಿ ಗ್ರಾಮದ ಸರ್ವೆ ನಂಬರ್ 37 ಪುಟ್ಟ ಬಸವಯ್ಯನ ಮಗ ಚೆನ್ನಬಸಪ್ಪರವರ ಅಡಿಕೆ ಸಸಿಗಳನ್ನು ದುಷ್ಕರ್ಮಿಗಳು ನಾಶಮಾಡಿದ್ದಾರೆ.

ನಷ್ಟ : ಸುಮಾರು ಎರಡು ವರ್ಷದ ಹಿಂದೆ ತಮ್ಮ ಜಮೀನಿನಲ್ಲಿ ನೆಟ್ಟಿದ್ದ 80 ಅಡಿಕೆ ಸಸಿಗಳನ್ನು ಏಕಾ ಏಕಿ ಕತ್ತರಿಸಲಾಗಿದೆ
ಕಾರಣದ ಶಂಕೆ : ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ದುಷ್ಕೃತ್ಯ ನಡೆಸಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ
ಚಿಕ್ಕನಾಯಕನಹಳ್ಳಿ ತಾಲೂಕು ರೈತ ಸಂಘದ ಅಧ್ಯಕ್ಷರಾದ ‘ಬಾಳೇಗೌಡ’ ಅವರು ನೊಂದ ರೈತರ ಕುಟುಂಬಕ್ಕೆ ಧೈರ್ಯ ತುಂಬಿ ಅವರಿಗೆ ನ್ಯಾಯ ದೊರಕಿಸಿ ಕೊಡುವುದಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ
ನೊಂದ ಚೆನ್ನ ಬಸಪ್ಪ ಅವರ ಧರ್ಮಪತ್ನಿ ಶಶಿಕಲಾ ಅವರು ಫೋನ್ ಕರೆ ಮುಖಾಂತರ ಮಾತನಾಡಿ ನಮಗೆ ಯಾವ ಶತ್ರುಗಳು ಸಹ ಇರಲಿಲ್ಲ,ನಮ್ಮ ಪಾಡಿಗೆ ನಾವು ಇದ್ದೆವು ಇದುವರೆಗೂ ನಾವು ಯಾರ ಹತ್ತಿರವು ದ್ವೇಷ ಕಟ್ಟಿಕೊಂಡಿರಲಿಲ್ಲ.ಯಾಕೆ ಈ ರೀತಿ ಮಾಡಿದ್ದಾರೆ ಎಂಬುದು ನಮಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ.
