
ಕುಡಿಯುವ ನೀರು ಸರಬರಾಜು ಪೈಪ್ ಗೆ ಕಲ್ಲು ತುಂಬಿದ ಕಿಡಿಗೇಡಿಗಳು
ಗದಗ, ಜು.14 : ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದ ಪೈಪ್ ನಲ್ಲಿ ದುಷ್ಕರ್ಮಿಗಳು ಕಲ್ಲು ತುಂಬಿದ್ದ ಘಟನೆ ಗದಗ ತಾಲೂಕಿನ ಅಡವಿಸೋಮಾರ ಗ್ರಾಮದಲ್ಲಿ ಬಳಿ ನಡೆದಿದೆ.
ಸದ್ಯ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತುಂಗಭದ್ರಾ ನದಿಯಿಂದ ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಸರಬರಾಜು ಮಾಡಲು ಪೈಪ್ ಲೈನ್ ಆಳವಡಿಸಲಾಗಿತ್ತು.ಆದರೆ ಇದೇ ಪೈಪ್ ಲೈನ್ ಗೆ ಅಡವಿಸೋಮಾರ ಗ್ರಾಮದಲ್ಲಿ ಬಳಿ ದುಷ್ಕರ್ಮಿಗಳು ಕಲ್ಲು ತುಂಬಿದ್ದಾರೆ.
ಇನ್ನು ದುಷ್ಕರ್ಮಿಗಳ ಈ ಕೃತ್ಯದಿಂದ ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಬಳಿಕ ಸ್ಥಳಕ್ಕೆ ನಗರಸಭೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದರು. ಅಲ್ಲದೆ, ನಗರಸಭೆ ಸಿಬ್ಬಂದಿಗಳು ಪೈಪ್ ನಲ್ಲಿರುವ ಕಲ್ಲು ತೆಗೆದು ನೀರು ಸರಬರಾಜಿ ಕ್ರಮ ಕೈಗೊಂಡಿದ್ದಾರೆ.
ಇದೇ ವೇಳೆ ಪೈಪ್ ಲೈನ್ ಗೆ ಕಲ್ಲು ತುಂಬಿದ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.
