Entertainmentಸ್ಯಾಂಡಲ್​ವುಡ್-Sandalwood

ದಿಲ್‌ ದಾರ್‌ ಗೆ ಸಜ್ಜಾದ, ಪಡ್ಡೆಹುಲಿ ನಟ!

ಪಡ್ಡೆಹುಲಿ ಚಿತ್ರದಲ್ಲಿ ನಟಿಸಿದ್ದಖ್ಯಾತನಟ ಶ್ರೇಯಸ್ ಮಂಜು ನಾಯಕನಾಗಿ ನಟಿಸುತ್ತಿರುವ `ದಿಲ್‌ದಾರ್‌’ ಎಂಬ ಹೊಸ ಚಿತ್ರ ಮೆಚ್ಚುಗೆಗೆ ಕಾರಣವಾಗಿದೆ. ಈಗಾಗಲೇ ಮಾಸ್ ಪಾತ್ರಗಳ ಮೂಲಕ ಗಮನ ಸೆಳೆದಿರುವ ಶ್ರೇಯಸ್ ಮಂಜು, ಈ ಚಿತ್ರದಲ್ಲಿ ಮತ್ತೊಂದು ಹಂತದ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಸುಳಿವೊಂದು ಈ ಮೂಲಕ ಜಾಹೀರಾಗಿದೆ.ಮಧು ಗೌಡ ಗಂಗೂರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಇದೀಗ ಬಿಡುಗಡೆಗೊಂಡಿದೆ.

ಏನ್ಸಿಯಂಟ್ ಮೂವೀಸ್ ಬ್ಯಾನರಿನಡಿಯಲ್ಲಿ ಆರ್. ಸಂತೋಷ್ ಕುಮಾರ್ ನಿರ್ಮಾಣ ಮಾಡಿರುವ ದಿಲ್‌ದಾರ್‌ಚಿತ್ರವೀಗ ಚಿತ್ರೀಕರಣವೆಲ್ಲ ಮುಗಿಸಿಕೊಂಡು ಬಿಡುಗಡೆಸಜ್ಜಾಗಿದೆ ಈ ಹಂತದಲ್ಲಿ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿದ್ದದ್ದೂ ಪ್ರೇಕ್ಷಕರನ್ನು ತಲುಪಲು ಚಿತ್ರತಂಡ ಪ್ರಯತ್ನಿಸಿದೆ. ಈ ಹಿಂದೆಯೇ ಶ್ರೇಯಸ್ ಮಂಜು ಈ ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ನಟಿಸಿದ್ದಾರೆಂದು ಚಿತ್ರತಂಡವು ತಿಳಿಸಿದೆ. ಅದರ ಚಹರೆ ಈ ಟೀಸರ್ ಮೂಲಕ ಅನಾವರಣಗೊಂಡಿದೆ.ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಇದೀಗ ಬಿಡುಗಡೆಗೊಂಡಿದೆ.

ಇದು ಭಿನ್ನವಾದೊಂದು ಪ್ರೇಮ ಕಥೆಯನ್ನು ಒಳಗೊಂಡಿರುವ ಪಕ್ಕಾ ಆಕ್ಷನ್ ಚಿತ್ರವೆಂಬ ಬಗ್ಗೆ ಚಿತ್ರತಂಡದವರು ತಿಳಿಸಿದ್ದಾರೆ. ನಟ ಶರಣ್ ಅವರ ತಂಗಿ ಮಗಳಾದ ಕೀರ್ತಿ ಕೃಷ್ಣ ಈ ಚಿತ್ರದ ಮೂಲಕವೇ ಮೊದಲಬಾರಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಾಧು ಕೋಕಿಲಾ, ಚಂದ್ರಪ್ರಭ, ಕಾರ್ತಿಕ್, ಚಿಲ್ಲರ್ ಮಂಜು ಮುಂತಾದ ಹಾಸ್ಯ ನಟರು ಈ ಚಿತ್ರದಲ್ಲಿ ಮುಖ್ಯಪಾತ್ರವಹಿಸಿದ್ದಾರೆ. ಕೆಜಿಎಫ್ ಖ್ಯಾತಿಯ ಆಂಡ್ರೋ ಅವಿನಾಶ್, ಭಜರಂಗಿ ಲೋಕಿ, ಅರ್ಪಿತ್ ಖಳನಟರಾಗಿ ನಟಿಸಿದ್ದಾರೆ. ಹರೇಕೃಷ್ಣ ರೆಡ್ಡಿ ಎಸ್ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ದಿಲ್ ದಾರ್ ಚಿತ್ರ ಕುರಿತಾದ ಮತ್ತಷ್ಟು ಮಾಹಿತಿಗಳು ಶೀಘ್ರದಲ್ಲಿಯೇ ಪ್ರೇಕ್ಷಕರನ್ನು ತಲುಪಲಿವೆ.

Share with Friends
author avatar
Digital Desk