
ಬೆಂಗಳೂರಿನಲ್ಲಿ ಡೆಡ್ಲಿ ಹಿಟ್ & ರನ್
ಬೆಂಗಳೂರು, ಜು.27 : ಬೆಂಗಳೂರಿನಲ್ಲಿ ಡೆಡ್ಲಿ ಹಿಟ್ & ರನ್ ನಡೆದಿದ್ದು, ಬೈಕ್‌ಗೆ ಗುದ್ದಿ ಕಾರು ಚಾಲಕ ಪರಾರಿಯಾಗಿರುವ ಘಟನೆ ನಡೆದಿದೆ.
ಬಸವೇಶ್ವರನಗರದ ಸತ್ಯನಾರಾಯಣ ಲೇಔಟ್ ನಲ್ಲಿ ನಡೆದ ಈ ಅಪಘಾತದಲ್ಲಿ ಬೈಕ್ ಸವಾರ ಲಿಖಿತ್ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಸತ್ಯನಾರಾಯಣ ಲೇಔಟ್ ನಲ್ಲಿ ಬೈಕ್ ಸವಾರ ಲಿಖಿತ್ ರಸ್ತೆ ಕ್ರಾಸಿಂಗ್ ಮಾಡುವ ವೇಳೆ ಏಕಾಏಕಿ ಹ್ಯೂಂಡಾ ಸಿಟಿ ಕಾರು ಡಿಕ್ಕಿ ಹೊಡೆದಿದೆ.ಪರಿಣಾಮ ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್ ನಿಂದ ಸವಾರ ಲಿಖಿತ್ ಹಾರಿಬಿದಿದ್ದಾನೆ.ಘಟನೆ ನಂತರ ಸ್ಥಳದಿಂದ ಕಾರು ಚಾಲಕ ಪರಾರಿಯಾಗಿದ್ದು,ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಈ ಸಂಬಂಧ ವಿಜಯನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರು ಚಾಲಕನ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ.
