Latestರಾಜ್ಯ-Karnataka

ಕೊನೆಗೂ ‘ಬೆಂದ’ಕಾಳೂರಿಗೆ ತಂಪನ್ನೇರೆದ ವರುಣಾ…! ನಿನ್ನೆ ಸಂಜೆ ಸುಮಾರು 3 ಗಂಟೆಗಳ ಕಾಲ ಮಳೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Silicon City) ನಿನ್ನೆ ಸಂಜೆ ಸುಮಾರು 3 ಗಂಟೆಗಳ ಕಾಲ ಮಳೆಯಾಗಿದ್ದು (Rain) , ಕೆಲವು ಕಡೆ ಅರ್ಧ ಗಂಟೆ, ಮತ್ತೆ ಕೆಲವು ಭಾಗದಲ್ಲಿ ಒಂದು ಗಂಟೆ ಕಾಲ ಮಳೆಯಾಗಿದೆ. ಬನಶಂಕರಿ, ಹಂಪಿನಗರ, ವಿಜಯನರ, ರಾಜರಾಜೇಶ್ವರಿನಗರ ಹಾಗೂ ನಾಯಂಡಹಳ್ಳಿ ಸುತ್ತಮುತ್ತ ಉತ್ತಮ ಮಳೆಯಾಗಿದೆ. ನಗರದ ಬಹುತೇಕ ಪ್ರದೇಶಗಳಲ್ಲಿ ಸುಮಾರು 10 ನಿಮಿಷ ಸಾಧಾರಣ ಮಳೆಯಾಗಿದೆ.

ಎಲ್ಲೆಲ್ಲಿ ಎಷ್ಟು ಮಳೆ (ಮಿ.ಮೀ)
-ವಿದ್ಯಾಪೀಠ – 20
-ಹಂಪಿನಗರ – -12.5
-ಮಾರುತಿ ಮಂದಿರ – 12
-ರಾಜರಾಜೇಶ್ವರಿನಗರ – 7.5
-ನಾಯಂಡಹಳ್ಳಿ – 7.5
-ಬಸವನಪುರ – 5.5
-ದೊಡ್ಡನೆಕ್ಕುಂದಿ – 5
-HSR – 5
-ಉತ್ತರಹಳ್ಳಿ – 5
-ಮಹದೇವಪುರ – 4
-ರಾಮಮೂರ್ತಿ ನಗರ – 4
-ಹೆಮ್ಮಿಗೆಪುರ – 4.5
-ಕೆಂಗೇರಿ – 4.5
-ಯಲಹಂಕ ಉಪನಗರ – 3.5
-ಹೊರಮಾವು – 3.5

https://youtu.be/nI2P8jWVlJE?si=kdZIUU2_cjD1Gm_6

ಜೊತೆಗೆ ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದುಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಿದೆ. ಮೇ 6 ಹಾಗೂ 7 ರಂದು ನಗರದಲ್ಲಿ ಸಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ ಇದ್ದು, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯದಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಹಗುರ ಮಳೆ ಸಾಧ್ಯತೆಗಳಿವೆ. ಬೀದರ್, ಕಲಬುರಗಿ, ಯಾದಗಿರಿ, ಬಳ್ಳಾರಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಉಷ್ಣ ಅಲೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Share with Friends
author avatar
News Desk