Latestಚಿಕ್ಕಮಗಳೂರು-Chikkamagaluruಚುನಾವಣೆ-Electionರಾಜ್ಯ-Karnataka

ಮದುಮಗಳಿಂದ ಮೊದಲ ಮತದಾನ: ಹಸೆಮಣೆ ಏರುವ ಮುನ್ನ ಮತಯಾಚನೆ

ಚಿಕ್ಕಮಗಳೂರು: ಹಸೆಮಣೆ ಏರುವ ಮುನ್ನ ಮದುಮಗಳಾಗಿ (Bride) ಅಲಂಕಾರಗೊಂಡು ಬುತ್‌ನಲ್ಲಿ ಯುವತಿ ಮೊದಲ ಮತದಾನ (Vote) ಮಾಡಿ ಮದುವೆಗೆ ತೆರಳಿರುವ ಘಟನೆ ಮೂಡಿಗೆರೆ (Mudigere) ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.

ಕುಂದೂರು (Kunduru) ಸಮೀಪದ ತಳವಾರ ಗ್ರಾಮದ ಸುಮೀಕ್ಷಾ ಎಂಬವರು ಕೊಪ್ಪ ಮೂಲದ ಸಂಜಯ್ ಎಂಬರೂಂದಿಗೆ ನಿಶ್ಚಯವಾಗಿದ್ದು, ಇಂದೇ ಮುದುವೆ ನಿಗದಿಯಾಗಿದ್ದ ಕಾರಣ ಮದುವೆ ಮಂಟಪಕ್ಕೆ ತೆರಳುವ ಮುನ್ನ ಮದುಮಗಳಾಗಿ ಅಲಂಕಾರಗೊಂಡು ಮೊದಲ ಮತದಾನ ಮಾಡಿ ಬಳಿಕ ಮದುವೆ ಮಂಟಪಕ್ಕೆ ತೆರಳಿದ್ದಾರೆ. ಇದನ್ನೂ ಓದಿ: Loka Sabha Election 2024: ತಪ್ಪದೇ ಇಂದು ಮತ ಚಲಾಯಿಸಿ

https://youtu.be/mC1KIAAE4mY?si=2a9-Sbr3SSAJqGR1

ಸಮೀಕ್ಷಾ ಅವರು ಕುಂದೂರು ಗ್ರಾಮದ ಬೂತ್ ನಂಬರ್ 86 ರಲ್ಲಿ ಮತದಾನ ಮಾಡಿದ್ದಾರೆ. ಇದೇ ವೇಳೆ ದೇಶದ ಭದ್ರತೆಯ ರಕ್ಷಣೆಗಾಗಿ ಸುಭದ್ರತೆಯ ಸರ್ಕಾರ ಮುಖ್ಯ ಎಂದು ಮದುಮಗಳು, ಜೊತೆಗೆ ಆಕೆಯ 11 ಕುಟುಂಬಸ್ಥರು ಸಹ ಮತದನ ಮಾಡಿದ್ದಾರೆ. ಯುವತಿಗೆ ಮತದಾರರು ಮತ್ತು ಚುನಾವಣಾ ಸಿಬ್ಬಂದಿ ಕೂಡ ಶುಭಕೋರಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯ 3 ಲೋಕಸಭಾ ಕ್ಷೇತ್ರಗಳಲ್ಲಿ ವಿಷಯಾಧಾರಿತ ಮತಗಟ್ಟೆ ಸ್ಥಾಪನೆ

Share with Friends
author avatar
News Desk