Latestಚುನಾವಣೆ-Electionಬೆಂಗಳೂರು-Bengaluruರಾಜ್ಯ-Karnataka

ಸ್ಟಾರ್ ಕ್ರಿಕೆಟಿಗ ದೊಡ್ಡ ಗಣೇಶ, ಸುಮಲತಾ ಜೊತೆ ಬಿಜೆಪಿಗೆ ಎಂಟ್ರಿ

ಬೆಂಗಳೂರು: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವು ಏರುತ್ತಿದೆ. ಈ ನಡುವೆ ಎಲೆಕ್ಷನ್‌ಗೆ ಸ್ಪರ್ಧಿಸುತ್ತಿರೋ ಅಭ್ಯರ್ಥಿಗಳು ಮತಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಗೆ ಬೆಂಬಲ ನೀಡಿದ್ದ ಸುಮಲತಾ ಅಂಬರೀಶ್ ಅವರು ಇದೀಗ ಬಿಜೆಪಿ ಪಾಳಯಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಕಚೇರಿಯಲ್ಲಿಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರಿದ್ದಾರೆ. ಸುಮಲತಾ ಅಂಬರೀಶ್ ಅವರ ಜೊತೆಗೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಇಂದು ಕೆಲ ಪ್ರಮುಖ ನಾಯಕರು ಬಿಜೆಪಿ ಪಕ್ಷ ಸೇರಿದ್ದಾರೆ. ಇದನ್ನೂ ಓದಿ: ಕೊನೆಗು ಸೋನುಗೆ ಜಾಮೀನು: ಇಂದು ಬಿಡುಗಡೆ

https://youtu.be/ODS2Izo8Lsk?si=fuwg5w1dIvn-useM

ಭಾರತದ ಮಾಜಿ ಕ್ರಿಕೆಟಿಗ, ಬಿಗ್‌ಬಾಸ್ ಸೀಸನ್ 4ರ ಮಾಜಿ ಸ್ಪರ್ಧೆ ದೊಡ್ಡ ಗಣೇಶ ಅವರು ಕೂಡ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಬೆಂಕಿ.. ಹೊತ್ತಿ ಉರಿದ ಖಾಸಗಿ ಕಟ್ಟಡ: ಲಕ್ಷಂತರ ಮೌಲ್ಯದ ಆಯುರ್ವೇದಿಕ್ ಮೆಡಿಸಿನ್ ಆಗ್ನಿಆಹುತಿ

https://youtu.be/qr5SSnfxj7I?si=eegdxZv4Klb12ZP1

ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಸಮ್ಮುಖದಲ್ಲಿ ಭಾರತದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ ಅವರು ಬಿಜೆಪಿ ಸೇರಿದರು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಕೇಸ್‌ನಲ್ಲಿ ಬಿಜೆಪಿ ಕಾರ್ಯಕರ್ತ ವಶಕ್ಕೆ

Share with Friends
author avatar
News Desk