Latestಬೆಂಗಳೂರು ಗ್ರಾಮಾಂತರರಾಜಕೀಯ | Politicsರಾಜ್ಯ-Karnataka

ಹೊಸಕೋಟೆ ಬ್ರಹ್ಮರಥೋತ್ಸವ ಸಮಿತಿಯಲ್ಲಿ ಮುಸ್ಲಿಂ ವ್ಯಕ್ತಿ ಸದಸ್ಯ – ಬಿಜೆಪಿ ಕಿಡಿ

ಬೆಂಗಳೂರು: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ಹೊಸಕೋಟೆ (Hoskote) ಟೌನ್ ಹೊಸಕೋಟೆಯಲ್ಲಿ ದೇವರ ಬ್ರಹ್ಮರಥೋತ್ಸ್ವ ಸಮೀತಿಗೆ ಮುಸ್ಲಿಂ (Muslim) ವ್ಯಕ್ತಯನ್ನ ಸದಸ್ಯನಾಗಿ ಮಾಡಿದ್ದಿಕ್ಕೆ ಬಿಜೆಪಿ (Bjp) ಆಕ್ರೋಶಗೊಂಡಿದೆ.

ಹೋಸಕೋಟೆಯಲ್ಲಿರುವ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ಸಮಿತಿಗೆ ಹಿಂದೂಯೇತರ ವ್ಯಕ್ತಿಯನ್ನು ಸದಸ್ಯನಾಗಿ ನೇಮಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹರಿಹಾಯ್ದಿದೆ.

https://youtu.be/7sitPAwCkf4?si=Ch-7ci6xAlhMh2yB

ಅವಿಮುಕ್ತೇಶ್ವರ ಬ್ರಹ್ಮರಥೋತ್ಸವದ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುವ ಕಾರಣ ಸಮಿತಿ ರಚಿಸುವಂತೆ ಶಾಸಕ ಶರತ್ ಬಚ್ಚೇಗೌಡ ಸರ್ಕಾರಕ್ಕೆ ಮನವಿ ಮಾಡಿದ್ದರು. ಶಾಸಕರ ಮನವಿ ಮೇರೆಗೆ ತಹಶಿಲ್ದಾರ್ 12 ಜನ ಸದಸ್ಯರನ್ನು ನೇಮಕ ಮಾಡಿದ್ದಾರೆ. ಈ 12 ಜನರಲ್ಲಿ ನವಾಜ್ ಎಂಬ ಓರ್ವ ಮುಸ್ಲಿಂ ವ್ಯಕ್ತಿಯನ್ನು ಆಯ್ಕೆ ಮಾಡಿದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ಕಾರ್ತಿಕ್ ಬೆಂಗಳೂರಿನಲ್ಲೇ ಇದ್ದಾನೆ, ಡಿಕೆಶಿಯಿಂದಲೇ ರಕ್ಷಣೆ: ಕುಮಾರಸ್ವಾಮಿ

https://youtu.be/IQHIqgFhrRc?si=gbK_N4n8AgMr1lRD

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ ದೇವಸ್ಥಾನ ಸಮಿತಿ ಪದಾಧಿಕಾರಿಗಳ ಅಧಿಕೃತ ಜ್ಞಾಪನಾ ಪತ್ರ ಪೋಸ್ಟ್ ಮಾಡಿ ಕಾಂಗ್ರೆಸ್ ಬಗ್ಗೆ ಎಚ್ಚರ ಎಂದು ಬರೆದು ಬರೆದುಕೊಂಡಿದೆ. ಇದನ್ನೂ ಓದಿ: ಪ್ರೀತಿಸುವಂತೆ ಬೆನ್ನು ಬಿದ್ದಿದ್ದ ಯುವಕ – ಕೊಲೆಗಾರನಾದ ಯುವತಿ ತಂದೆ

https://youtu.be/AddYyJKhTeg?si=5uuZT_ZQs_WIxSD1
Share with Friends
author avatar
News Desk