Crime NewsLatestಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

ಕಿಡ್ನಾಪ್ ಪ್ರಕರಣ: ರೇವಣ್ಣ ಜೈಲುಪಾಲು

ಬೆಂಗಳೂರು: ವಿರುದ್ಧದ ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಹಾಗೂ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಡಿ ರೇವಣ್ಣ (HD.Revanna) ಅವರಿಗೆ ಇಂದು (ಮೇ.08) ನ್ಯಾಯಾಂಗ ಬಂಧನಕ್ಕೆ ವಿಧಿಸಿ ಕೋರ್ಟ್ (Court) ಆದೇಶಿಸಿದೆ.

ಏಳು ದಿನದವರೆಗೆ ಅಂದರೆ ಮೇ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ. ಈ ಹಿನ್ನಲೆ ರೇವಣ್ಣರನ್ನು ಎಸ್‌ಐಟಿ (SIT) ಅಧಿಕಾರಿಗಳು ಪರಪ್ಪನ ಅಗ್ರಹಾರ (Parapanna Agrahara) ಜೈಲಿಗೆ ಕರೆದೊಯ್ಯುತ್ತಿದ್ದಾರೆ. ಇದನ್ನೂ ಓದಿ: ಹೊಸಕೋಟೆ ಬ್ರಹ್ಮರಥೋತ್ಸವ ಸಮಿತಿಯಲ್ಲಿ ಮುಸ್ಲಿಂ ವ್ಯಕ್ತಿ ಸದಸ್ಯ – ಬಿಜೆಪಿ ಕಿಡಿ

https://youtu.be/AddYyJKhTeg?si=5uuZT_ZQs_WIxSD1

ಪ್ರಕರಣ ಸಂಬಂಧ ಎಸ್‌ಐಟಿ ಕಸ್ಟಡಿಯಲ್ಲಿರುವ ರೇವಣ್ಣ ಆಪ್ತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ತನಿಖೆ ಭರದಿಂದ ಸಾಗಿದೆ. ಇನ್ನು ರೇವಣ್ಣ ಪರ ಜಾಮೀನಿಗೆ ಅವರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕಸ್ಟಡಿಯಲ್ಲಿರೋ ವ್ಯಕ್ತಿಗೆ ಜಾಮೀನು ಕೊಡುವುದು ಹೇಗೆ ಎಂದು ನ್ಯಾಯಾಧೀಶರು ರೇವಣ್ಣ ಪರ ವಕೀಲರನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ಕಾರ್ತಿಕ್ ಬೆಂಗಳೂರಿನಲ್ಲೇ ಇದ್ದಾನೆ, ಡಿಕೆಶಿಯಿಂದಲೇ ರಕ್ಷಣೆ: ಕುಮಾರಸ್ವಾಮಿ

https://youtu.be/S1f0nuU9A04?si=6vAoSZl9j0A1qgVk

ಇದಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ವಕೀಲರು ವಾದ ಮುಂದಿಟ್ಟಿದ್ದರ. ಆದರೂ ಈ ಬಗ್ಗೆ ಎಸ್‌ಐಟಿ ಪ್ರತಿಕ್ರಿಯಿಸಲಿ ಅಂತಾ ಎಸ್ಐಟಿಗೆ ನೋಟಿಸ್ ನೀಡಿ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು. ಅದರಂತೆ ಇಂದು ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ. ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ಸಂತ್ರಸ್ತೆಯರ ಸ್ಪೋಟಕ ಹೇಳಿಕೆ- ಏನು?

https://youtu.be/2xXPei1QvXY?si=58_pbzD1RHXWyzXj
Share with Friends
author avatar
News Desk