Latestಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

ಡಿಕೆ ಶಿವಕುಮಾರ್ ಜತೆ ಪೋನ್‌ನಲ್ಲಿ ಮಾತಾಡಿದ್ದು ನಿಜ: ಶಿವರಾಮೇಗೌಡ

ಬೆಂಗಳೂರು: ದೇವರಾಜೇಗೌಡ (Deveraje Gowda) ನನ್ನನ್ನು ಭೇಟಿಯಾಗಿದ್ದು, ಡಿಕೆ ಶಿವಕುಮಾರ್ (DK. Shivakumar) ಜೊತೆ ಫೋನ್‌ನಲ್ಲಿ ಮಾತಾಡಿದ್ದು ನಿಜ ಎಂದು ಮಾಜಿ ಸಂಸದ ಶಿವರಾಮೇಗೌಡ (Shivaramegowda) ಹೇಳಿದ್ದಾರೆ.
ಶವರಾಮೇಗೌಡ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಆಫೀಸ್‌ನಲ್ಲಿದ್ದಾಗ ಹೊಳೆನರಸಿಪುರದ ಕೆಲವರು ಬಂದಿದ್ದರು. ಅವರು ದೇವರಾಜೇಗೌಡ ನಿಮ್ಮನ್ನು ಭೇಟಿ ಮಾಡಬೇಕು ಅಂತ ನನಗೆ ಹೇಳಿದರು. ಬಳಿಕ ಅವರು ದೇವರಾಜೇಗೌಡಗೆ ಫೋನ್ ಮಾಡಿಕೊಟ್ಟರು. ಆಗ ನಾನು ಏನಪ್ಪ ಚೆನ್ನಾಗಿದ್ದೀಯಾ, ನಿನ್ನ ಆಸೆ ಈಡೇರಿತು. ವರ್ಷಾನುಗಟ್ಟಲೇ ಹೋರಾಟ ಮಾಡುತ್ತಿದ್ದೆ. ಎಲ್ಲವೂ ಆಚೆಗೆ ಬಂತು ಅಂತ ಫೋನ್‌ನಲ್ಲಿ ಇಷ್ಟೇ ಮಾತನಾಡಿದ್ದೇನೆ ಎಂದು ಶಿವರಾಮೇಗೌಡ ಹೇಳಿದರು. ಇದನ್ನೂ ಓದಿ: ಕಿಡ್ನಾಪ್ ಪ್ರಕರಣ: 7 ದಿನದವರೆಗೆ ರೇವಣ್ಣನಿಗೆ ಜೈಲೇ ಗತಿ

https://youtu.be/EPrqVJYszHM?si=keJAqjY8qg9XsGRv

ಡಿಕೆ ಶಿವಕುಮಾರ್ ಮತ್ತು ನನ್ನ ಸಂಬಂಧ ರಾಜಕೀಯಕ್ಕಿಂತ ಮಿಗಿಲಾದ ಸಂಬಂಧ. ಖಾಸಗಿ ಹೊಟೇಲ್‌ನಲ್ಲಿ ನನ್ನನ್ನು ಭೇಟಿಯಾದನು. ಇಲ್ಲಿಯೂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿಸುವಂತೆ ಹಟ ಹಿಡಿದ. ಆಗ ನಾನು ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿ, ಮಾತಾಡಿದೆ. ಬಳಿಕ ನಾನು ಮಾತನಾಡಿದ್ದ ಫೋನ್ ಅನ್ನೇ ದೇವರಾಜೇಗೌಡಗೆ ಕೊಟ್ಟೆ. ಆಗ ಡಿಕೆ ಶಿವಕುಮಾರ್ ಅವರು ಹೇಗಿದ್ದೀಯಾ ದೇವರಾಜೇಗೌಡ, ಹೋರಾಟ ಹೇಗೆ ನಡೆಯುತ್ತಿದೆ ಎಂದರು. ಇದನ್ನೂ ಓದಿ: ಹೊಸಕೋಟೆ ಬ್ರಹ್ಮರಥೋತ್ಸವ ಸಮಿತಿಯಲ್ಲಿ ಮುಸ್ಲಿಂ ವ್ಯಕ್ತಿ ಸದಸ್ಯ – ಬಿಜೆಪಿ ಕಿಡಿ

https://youtu.be/S1f0nuU9A04?si=zbOW8v5MiTQxmmgy

ದೇವರಾಜೇಗೌಡ ಡಿಕೆ ಶಿವಕುಮಾರ್ ಅವರ ಜೊತೆ 1:30 ನಿಮಿಷ ಮಾತಾಡಿದ. ಆಗ ಡಿಕೆ ಶಿವಕುಮಾರ್ ಅವರು ನಿನ್ನ ಹತ್ತಿರ ಏನಿದೆ ಎಸ್‌ಐಟಿಗೆ ಕೊಡು ಅಂತ ದೇವರಾಜೇಗೌಡಗೆ ಹೇಳಿದರು, ಇಷ್ಟೇ ನಡೆದ ಸಂಭಾಷಣೆ ಎಂದು ಶಿವರಾಮೇಗೌಡ ತಿಳಿಸಿದ್ದಾರೆ. ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ಕಾರ್ತಿಕ್ ಬೆಂಗಳೂರಿನಲ್ಲೇ ಇದ್ದಾನೆ, ಡಿಕೆಶಿಯಿಂದಲೇ ರಕ್ಷಣೆ: ಕುಮಾರಸ್ವಾಮಿ

https://youtu.be/2xXPei1QvXY?si=38Q60Oq1BZsRV4ki

ನನಗೂ ಹಾಗೂ ಕಾರ್ತಿಕ್?ಗೌಡಗೂ ಪರಿಚಯವೇ ಇಲ್ಲ. ನನಗೆ ಗೊತ್ತಿರುವುದು ವಕೀಲ ದೇವರಾಜೇಗೌಡ ಅಷ್ಟೆ. ಇಷ್ಟೆಲ್ಲ ಆದಮೇಲೆ ಅವನ ಸಹವಾಸವೇ ಬೇಡಪ್ಪ. ಅವನನ್ನು ಪಕ್ಷದಿಂದ ಹೊರಹಾಕಬೇಕು. ಪೆನ್?ಡ್ರೈವ್ ರುವಾರಿಗಳು ದೇವರಾಜೇಗೌಡ, ಕಾರ್ತಿಕ್ ಗೌಡ. ಇವರಿಬ್ಬರ ಬಗ್ಗೆ ಎಸ್‌ಐಟಿ ತನಿಖೆ ನಡೆಸಿ ಕ್ರಮಕೈಗೊಳ್ಳಲಿ ಎಂದು ಮಾಜಿ ಸಂಸದ ಶಿವರಾಮೇಗೌಡ ಆಗ್ರಹಿದರು. ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ಸಂತ್ರಸ್ತೆಯರ ಸ್ಪೋಟಕ ಹೇಳಿಕೆ- ಏನು?

https://youtu.be/WlU72Pb6dPQ?si=PTlUGp3kDr8mNj7D
Share with Friends
author avatar
News Desk