
ತುಮಕೂರು ಮಹಾನಗರ ಪಾಲಿಕೆಯ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಡಿಸ್ಪ್ಲೇ ಬೋರ್ಡ್ ಅಳವಡಿಕೆ
ತುಮಕೂರು: ನಗರದ ಅಮಾನಿ ಕೆರೆಯಲ್ಲಿ ನವೀನ ರೀತಿಯಲ್ಲಿ ತೇಲುವ ಸಂಗೀತ ಕಾರಂಜಿ ಕಾಮಗಾರಿಗೆ ಡಿಸಿಎಂ ಪರಮೇಶ್ವರ್ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ತುಮಕೂರು ಮಹಾನಗರ ಪಾಲಿಕೆಯ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಡಿಸ್ಪ್ಲೇ ಬೋರ್ಡ್ ಅಳವಡಿಕೆ ಮಾಡಲಾಗಿದೆ. ಕಾಮಗಾರಿಗು ಕೂಡ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ಈ ವೇಳೆ ಮಾತನಾಡಿದ ಪಾಲಿಕೆ ಆಯುಕ್ತೆ ಶುಭ ಅವರು ಅಮಾನಿ ಕೆರೆಯಲ್ಲಿ ನಿರ್ಮಾಣವಾಗುತ್ತಿರುವ ಕಾರಂಜಿ ಕಾಮಗಾರಿ ಅಕ್ಟೋಬರ್ ನಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ತುಮಕೂರು ಸಿಟಿ ಬೆಳೆಯುತ್ತಿದ್ದು ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ.ನ್ಯೂಯಾರ್ಕ್ ಮಾದರಿಯಲ್ಲಿ ತುಮಕೂರು ನಗರದಲ್ಲಿ ಡಿಸ್ಪ್ಲೇ ಬೋರ್ಡ್ ಅಳವಡಿಸಲಾಗುತ್ತಿದೆ.
ಹಾಗೂ ಬೆಂಗಳೂರು,ಹೊನ್ನಾವರ, ಶಿವಮೊಗ್ಗ ಮಾರ್ಗವಾಗಿರುವುದರಿಂದ ನಮ್ಮ ತುಮಕೂರನ್ನು ಮತ್ತಷ್ಟು ಕಳೆಗಟ್ಟಿಸಲು ಈ ಡಿಸ್ಪ್ಲೇ ಬೋರ್ಡ್ ಅಳವಡಿಸಲಾಗುತ್ತಿದೆ.
ತುಮಕೂರಿನ ಮತ್ತಷ್ಟು ಅಭಿವೃದ್ಧಿಯ ಕಾರ್ಯಕ್ರಮಗಳು ಹಿನ್ನೆಲೆಯಲ್ಲಿ ವಿಶೇಷವಾಗಿ ದಸರಾ ಹಬ್ಬ ಬರ್ತಾ ಇದೆ ಇದರಲ್ಲಿ ಎರಡು ಕಾರ್ಯಕ್ರಮವನ್ನು ನೂತನವಾಗಿ ಪ್ರಾರಂಭ ಮಾಡ್ತಾ ಇದ್ದೇವೆ ಎಂದಿದ್ದಾರೆ.
ಒಂದು ಅಮಾನಿ ಕೆರೆಯಲ್ಲಿ ಒಂದು ಮ್ಯೂಸಿಕಲ್ ಫೌಂಟನ್ಮಾಡ್ತಾ ಇದ್ದೇವೆ ಹಾಗೂ ಪ್ರತಿ ಶನಿವಾರ ಭಾನುವಾರ ಆನ್ ಮಾಡುವುದಕ್ಕೆ ನಾವು ಅಂದಾಜು ಮಾಡಿಕೊಂಡಿದ್ದೇವೆ.
ತುಮಕೂರು ಬಿಟ್ಟು ನಾವು ಎಲ್ಲಾ ಕಡೆ ನೋಡಿದ್ದೇವೆ ಅದಕ್ಕೆ ತುಮಕೂರಿನಲ್ಲೂ ಕೂಡ ಅದೇ ರೀತಿ ಒಂದು ಸೆಂಟರ್ ಇರಲಿ ಎಂದು ಡಿಸ್ಪ್ಲೇ ಬೋರ್ಡ್ ಅಳವಡಿಕೆ ಮಾಡಲಾಗಿದೆ.
ತುಮಕೂರು ಕ್ವೇರ್ ಅಂತ ಯಾಕೆ ಮಾಡಬಾರದು ತುಮಕೂರು ಕೂಡ ಆಧುನಿಕತೆಯಲ್ಲಿ ಮುಂದಿದೆ ಎಂದು ತಿಳಿಸಿದ್ದಾರೆ.ತುಮಕೂರಿನ ಬೆಳವಣಿಗೆಗೆ ಇದು ಪೂರಕವಾಗಿ ಪರ್ಮನೆ ಆಗಿರುತ್ತದೆ,ಎಸ್ ಎಸ್ ಸರ್ಕಲ್ ಅಂದ್ರೆ ಶಿವಕುಮಾರ ಸ್ವಾಮಿ ಅವರ ಸರ್ಕಲ್
ಎಸ್ ಎಸ್ ಸರ್ಕಲ್ ಅನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ,ತುಮಕೂರು ಸ್ಕ್ವಯರ್ ಅಂತ ಒಂದು ಇದ್ರೆ ಇಲ್ಲಿ ಎಲೆಕ್ಟ್ರಾನಿಕ್ ಡಿಸ್ಪ್ಲೇ ಆಗ್ತಾ ಇದೆ ಎಲ್ಲಾ ದಿಕ್ಕಿನಲ್ಲೂ ಕೂಡ ಎಲೆಕ್ಟ್ರಾನಿಕ್ ಡಿಸ್ಪ್ಲೇ ,ನಮ್ಮ ರಾಜ್ಯದ ಎಲ್ಇಡಿ ಡಿಸ್ಪ್ಲೇ ಆದರೆ ಅಭಿವೃದ್ಧಿ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.
