LatestTop Storiesಜಿಲ್ಲಾ ಸುದ್ದಿಗಳು | District News

ಭೀಕರ ಬರಗಾಲಕ್ಕೆ ಸಿಲುಕಿ ತಾನೇ ಬೆಳೆದ 5 ಎಕರೆ ಶೇಂಗಾ ಬೆಳೆ ನಾಶ ಮಾಡಿದ ಅನ್ನದಾತ

ಹುಬ್ಬಳ್ಳಿ : ಭೀಕರ ಬರಗಾಲಕ್ಕೆ ಸಿಲುಕಿ ರಾಜ್ಯದ ಅನ್ನದಾತ ಸಂಪೂರ್ಣ ನಲುಗಿ ಹೋಗಿದ್ದಾನೆ.

ಧಾರವಾಡ ಜಿಲ್ಲೆಕುಂದಗೋಳ ತಾಲೂಕಿನಲ್ಲಿ ಬರ ಆವರಿಸಿದ್ದರೂ, ಬರ ಪಿಡೀತ ತಾಲೂಕು ಎಂದು ಘೋಷಿಸದೆ ಸರ್ಕಾರ ಅನ್ನದಾತರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿದೆ.

ಬರಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ಕುಂದಗೋಳ ಗಾಳಿ ಮರಿಯಮ್ಮ ಗುಡಿಯಿಂದ ಪಾದಯಾತ್ರೆ ಮೂಲಕ ತಹಶೀಲ್ದಾರ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಭೀಕರ ಬರಗಾಲಕ್ಕೆ ಸಿಲುಕಿ ತಾನೇ ಬೆಳೆದ 5 ಎಕರೆ ಶೇಂಗಾ ಬೆಳೆ ನಾಶ ಮಾಡಿದ ಅನ್ನದಾತ

ಕರ್ನಾಟಕ ರಾಜ್ಯ ಹಸಿರು ಸೇನೆಯಿಂದ ಪ್ರತಿಭಟನೆ ಮೂಲಕ ತಹಶೀಲ್ದಾರ ರಾಜು ಮಾಳಕರ್ ಅವರ ಮುಖಾಂತರ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕುಂದಗೋಳ ಕಲ್ಯಾಣಪುರ್ ಬಸವಣ್ಣ ಅಜ್ಜನವರು ಮತ್ತು ಶಿವಾನಂದ ಮಠದ ಸದ್ಗುರು ಶಿವಾನಂದ ಮಹಾಸ್ವಾಮಿಗಳು ರಾಜ್ಯಾಧ್ಯಕ್ಷ ವಾಸುದೇವ್ ಮೇಟಿ ವಿಠಲ ಘಾಟಗೆ ಸೇರಿದಂತೆ ಅನೇಕ ರೈತ ಮುಖಂಡರು ಭಾಗವಹಿಸಿದ್ದರು.

ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಸಾಲಸೋಲ ಮಾಡಿ ಬೆಳೆದಿದ್ದ 5 ಎಕರೆ ಶೇಂಗಾ ಬೆಳೆಯನ್ನು ಟ್ರಾಕ್ಟರ್ ಮೂಲಕ ನಾಶ ಮಾಡಲಾಯಿತು.ಬೆಳೆಯು ಸಂಪೂರ್ಣ ಒಣಗಿ ಹೋಗಿದ್ದನ್ನು ಕಂಡು ರೈತರು ಪರದಾಡುತ್ತಿದ್ದಾರೆ.ಸಾಲ ಸೋಲ ಮಾಡಿ ಹೊಲಕ್ಕೆ ಎಕ್ಕರೆಗೆ 10 ಸಾವಿರ ರೂಪಾಯಿ ಖರ್ಚು ಮಾಡಿದ್ದ ರೈತನ ಚಿತ್ತ ಈಗ ಸರಕಾರದತ್ತ ಆಗಿದೆ.

ಬೆಳೆಯುವ ಬಂದಿಲ್ಲ ರೈತರಿಗೆ ಪರಿಹಾರವೂ ಬಂದಿಲ್ಲ ನಮ್ಮ ಕುಂದಗೋಳ ತಾಲೂಕನ್ನು ಬರಪೀಡಿತ ಎಂದು ಸರ್ಕಾರವು ಘೋಷಣೆ ಮಾಡಿಲ್ಲ ಎಂದು ಅನ್ನದಾತರು ಗೋಳು ತೋಡಿಕೊಳ್ಳುತ್ತಿದ್ದಾರೆ.

Share with Friends
author avatar
Digital Desk