Latestಬೆಂಗಳೂರು-Bengaluruರಾಜ್ಯ-Karnataka

ವಿಧಾನ ಪರಿಷತ್‌ ಚುನಾವಣೆಗೆ ಅವಿರೋಧವಾಗಿ 11 ಅಭ್ಯರ್ಥಿಗಳು ಆಯ್ಕೆ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ (Karnataka Legislative Council Elections) ನಡೆದ ಚುನಾವಣೆಯಲ್ಲಿ 11 ಅಭ್ಯರ್ಥಿಗಳೂ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾ ಅಧಿಕಾರಿ ವಿಶಾಲಾಕ್ಷಿ ಅಧಿಕೃತ ಘೋಷಣೆ ಮಾಡಿದ್ದಾರೆ.

ಕಾಂಗ್ರೆಸ್‌ನಿಂದ 7, ಬಿಜೆಪಿಯಿಂದ 3, ಜೆಡಿಎಸ್‌ನಿಂದ 1 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ಬೋಸರಾಜು, ಐವಾನ್ ಡಿಸೋಜಾ, ವಸಂತ್ ಕುಮಾರ್, ಬಿಲ್ಕೀಸ್ ಬಾನು‌, ಜಗದೇವ್ ಗುತ್ತೇದಾರ್, ಗೋವಿಂದ್ ರಾಜು, ಯತೀಂದ್ರ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಆರೋಪ ಪ್ರಕರಣ: ಮತ್ತೆ 4 ದಿನ ಪ್ರಜ್ವಲ್‌ ರೇವಣ್ಣ ಪೊಲೀಸ್‌ ಕಸ್ಟಿಡಿಗೆ

https://youtu.be/IrlpjBl1yQk?si=OtDE8SGQp7xRmKP2

ಬಿಜೆಪಿಯಿಂದ ಸಿ.ಟಿ.ರವಿ, ರವಿಕುಮಾರ್, ಎಂ.ಜಿ.ಮೂಳೆ ಆಯ್ಕೆ ಆಗಿದ್ದಾರೆ. ಜೆಡಿಎಸ್‌ನಿಂದ ಜವರಾಯೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಬರ್ತ್‍ಡೇ ಪಾರ್ಟಿಗೆಂದು ಕರೆದು ಸ್ನೇಹಿತನ ಕೊಲೆ

https://youtu.be/EN_1kRxjo-4?si=m0g8Sq0C7IWF8fL_
Share with Friends
author avatar
News Desk