EntertainmentLatest

ಚುನಾವಣೆಯಲ್ಲಿ ಗೆದ್ದ ಬಾಲಯ್ಯಗೆ ಅಭಿನಂದನೆ ತಿಳಿಸಿದ ಕಾಜಲ್‌

ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬಿದಿದ್ದು, ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು 3ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದೀಗ ಅವರಿಗೆ ಕಾಜಲ್‌ ಅಗರ್ವಾಲ್‌ (Kajal Agarwal) ವಿಶ್‌ ಮಾಡಿದ್ದಾರೆ.

ಟಿಡಿಪಿ ಅಭ್ಯರ್ಥಿಯಾಗಿ ಹಿಂದೂಪುರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಬಾಲಯ್ಯ ಅವರು ಎದುರಾಳಿ ವೈಎಸ್‌ಆರ್‌ಸಿಯ ದೀಪಿಕಾ ಮುಂದೆ 31,602 ಬಹುಮತಗಳಿಂದ ಗೆದ್ದಿದ್ದಾರೆ. ಬಾಲಯ್ಯ ಗೆಲುವಿಗೆ ತೆಲುಗಿನ ಸ್ಟಾರ್ಸ್ ಅಭಿನಂದನೆ ತಿಳಿಸಿದ್ದು, ಇದರಲ್ಲಿ ಕಾಜಲ್‌ ಅಹ ಅಭಿನಂದನೆ ತಿಳಿಸಿದ್ದಾರೆ.

ಬಾಲಯ್ಯ ಅವರೇ ನಿಮ್ಮ ಅಮೋಘ ಯಶಸ್ಸಿಗೆ ಧನ್ಯವಾದಗಳು. ನಿಮ್ಮ ಪರಿಶ್ರಮ, ಬದ್ಧತೆ, ದೂರದೃಷ್ಟಿಯ ಕಾರಣದಿಂದಾಗಿ ನಿಮಗೆ ಜನರಿಂದ ಈ ಪರಿ ಪ್ರೀತಿ ಸಿಕ್ಕಿದೆ ಎಂದು ಕಾಜಲ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ. ಇನ್ನು ಈ ಪೋಸ್ಟ್ ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ ಕೆಲವರು ಕಡುವಾಗಿ ಕಾಮೆಂಟ್‌ ಮಾಡಿದ್ದಾರೆ.

https://youtu.be/EN_1kRxjo-4?si=xmandvtse4xKHRHN

ಇತ್ತೀಚೆಗೆ ಬಾಲಯ್ಯ ಅವರು ಭಾರೀ ಸುದ್ದಿಯಲ್ಲಿದ್ದಾರೆ. ಸಿನಿಮಾ ಸಮಾರಂಭವೊಂದರಲ್ಲಿ ನಟಿ ಅಂಜಲಿರನ್ನು ಬಾಲಯ್ಯ ತಳ್ಳಿದ್ದರು. ಈ ವಿಚಾರಕ್ಕೆ ಬಾಲಯ್ಯಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಅಂಜಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಸಿನಿಮಾ ಕಾಯಕ್ರಮಕ್ಕೆ ಬಂದು ಬೆಂಬಲ ನೀಡಿದಕ್ಕೆ ಥ್ಯಾಂಕ್ಯೂ ಹೇಳಿ ವಿವಾದಕ್ಕೆ ತೆರೆ ಎಳೆದಿದ್ದರು.

Share with Friends
author avatar
News Desk