
ರೈತರ ಹೊಟ್ಟೆ ಮೇಲೆ ಹೊಡಿಬೇಡಿ – ಬಿಡಿಎ ಸೈಟ್ ವಿಚಾರದಲ್ಲಿ ಸರ್ಕಾರದ ವಿರುದ್ಧ ದೇವೆಗೌಡರ ಆಕ್ರೋಶ
ರಾಮನಗರ: ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಅವರು ಇಂದು ಬಿಡಿಎ ಸೈಟ್ ಮತ್ತು ರೈತರ ಭೂಸ್ವಾಧೀನ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 1994ರಲ್ಲಿ ರಾಮನಗರದಿಂದ ತಾವು ಆಯ್ಕೆಯಾಗಿ ಸಿಎಂ ಮತ್ತು ಪಿಎಂ ಆದ ನೆನಪುಗಳನ್ನು ಮೆಲುಕು ಹಾಕಿದ ಅವರು, ಒಕ್ಕಲಿಗ ಸಮುದಾಯದ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯದ ಬಗ್ಗೆಯೂ ತಿರುಗೇಟು ನೀಡಿದರು.
ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಿಎಂ ಇದ್ದಾರೆ. ದೇವೆಗೌಡರು, ಕುಮಾರಸ್ವಾಮಿ, ನಿಖಿಲ್ ಬೇರೆ ಒಕ್ಕಲಿಗರನ್ನ ಸಹಿಸಲ್ಲ ಎಂದು ಆಪಾದನೆ ಮಾಡ್ತಾರೆ. ಯಾರೇ ಸಿಎಂ ಆಗಿ ಒಳ್ಳೆಯ ಕೆಲಸ ಮಾಡಲಿಎಂದು ಹೇಳಿದ ದೇವೆಗೌಡರು,ಸತ್ಯವನ್ನ ಹೇಳಿ, ಯಾರಿಗಾಗಿ ಇದನ್ನ ಮಾಡ್ತಾ ಇದ್ದೀರಿ` ಎಂದು ಪ್ರಶ್ನಿಸಿದರು.
ಬಿಡಿಎ ನಲ್ಲಿ 20 ಸಾವಿರ ಸೈಟ್ ಖಾಲಿ ಇದೆ. ಇದನ್ನ ನಾನ್ ಹೇಳಿದ್ದಲ್ಲ, ಸತೀಶ್ ಜಾರಕಿಹೊಳಿ ಹೇಳಿದ್ದು ಎಂದು ದೇವೆಗೌಡರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.ಕನಕಪುರದಲ್ಲಿ ನೀವು ತಗೊಂಡಿರೋ ಸೈಟ್, ಅಲ್ಲಿ ಯಾವ ಯೋಜನೆಗೆ ಎಂದು ಕೊಟ್ಟು ಆಮೇಲೆ ಇಲ್ಲಿ ತೀರ್ಮಾನ ಮಾಡಿ. ಬಿಡದಿಯವರು ಟೌನ್‌ಶಿಪ್ ಬೇಕೆಂದು ಅರ್ಜಿ ಹಾಕಿದ್ದಾರ? ಸಿಎಂ ಡಿಕೆ ಶಿವಕುಮಾರ್ ಅವರೇ ಹೇಳಿ` ಎಂದು ಅವರು ಒತ್ತಾಯಿಸಿದರು.
ರೈತರ ಹೊಟ್ಟೆ ಮೇಲೆ ಹೊಡಿಬೇಡಿ. ಡಿಕೆ ಶಿವಕುಮಾರ್ ಎರಡು ವರ್ಷ ರಾಜ್ಯ ಆಳಿದ್ರೆ ನಮಗೆ ಹೊಟ್ಟೆಕಿಚ್ಚು ಎಂದು ಸುಳ್ಳು ಆಪಾದನೆ ಮಾಡ್ತೀರಿ. ರೈತರ ಹೊಟ್ಟೆ ಹೊಡೆದು ಯಾವ ಪುರುಷಾರ್ಥಕ್ಕೆ ಮಾಡ್ತೀರಿ?` ಎಂದು ಅವರು ಪ್ರಶ್ನಿಸಿದರು.
ನಿನ್ನೆ ದೆಹಲಿಗೆ ಹೋಗುವ ಮೊದಲು 3 ಕೋಟಿ ಕೊಡ್ತೇವೆ ಎಂದು ಹೇಳ್ತೀರಾ. ಇಲ್ಲಿ ಸೇರಿರೋ ಜನ ಅವರಾಗೆ ಕರೆದು ಜಾಗ ಕೊಡ್ತೇವೆ ಎಂದಿದ್ದಾರ?ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿದ್ದರಾಮಯ್ಯನವರನ್ನ ತೆಗೆದು ಸಿಎಂ ಆಗಲಿಕ್ಕೆ ನೀವು ದೆಹಲಿಯಲ್ಲಿ ಏನೇನು ಸಹಾಯ ಯಾರಿಗೆ ಮಾಡ್ತೇವೆಂದು ಭರವಸೆ ಕೊಟ್ಟು ಬಂದಿದ್ದೀರೋ? ಕೈ ಮುಗಿದು ಪ್ರಾರ್ಥನೆ ಮಾಡ್ತೇವೆ. ಅವರಾಗಿ ಕೊಟ್ಟರೆ ಜಾಗ ತಗೊತೇವೆ ಎಂದು ಹೇಳ್ತೀರಾ ಎಂದು ದೇವೆಗೌಡರು ಕಿಡಿಕಾರಿದರು.
ನನ್ನ ಬುದ್ದಿಗೆ ವಯಸ್ಸಾಗಿಲ್ಲ, ಶರೀರಕ್ಕೆ ವಯಸ್ಸಾಗಿದೆ. 93 ವರ್ಷ ಆಗಿರಬಹುದು. ನಾನು ಯಾವ ಕಾರಣಕ್ಕೂ ಹಿಂದೆ ಸರಿಯಲ್ಲಎಂದು ಸ್ಪಷ್ಟಪಡಿಸಿದರು.ಭೂಮಿಗೆ ಚಿನ್ನದ ಬೆಲೆ ಇದೆ. ಇಲ್ಲಿನ ಜೀವನೋಪಾಯವೇ ವ್ಯವಸಾಯ. ಭೂಮಿ ಮಾತ್ರ ಬಿಡಲ್ಲ. ಹೋರಾಟ ಮುಂದುವರೆಸುತ್ತೇವೆ ಎಂದು ಅವರು ಘೋಷಿಸಿದರು.ಬಿಡಿಎ ಸೈಟ್ ಹಂಚಿಕೆ ಮತ್ತುರೈತರ ಭೂಸ್ವಾಧೀನದ ವಿರುದ್ಧ ಆಗಸ್ಟ್ 19ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ದೇವೆಗೌಡರು ಘೋಷಿಸಿದರು.
