
ಆಹಾರ ಇಲಾಖೆ ಸಿಬ್ಬಂದಿ ಬಾರದೆ ಕಾದು ಕಾದು ಸುಸ್ತಾದ ಸಾರ್ವಜನಿಕರು!
ದೇವನಹಳ್ಳಿ:ದೇವನಹಳ್ಳಿ ಆಹಾರ ಇಲಾಖೆ ಬಳಿ ಕಾದು ಕಾದು ಸಾರ್ವಜನಿಕರು ಸುಸ್ತಾಗಿದ್ದಾರೆ.ಬೆಳಗ್ಗೆ 11.20 ಆದರೂ ಕಚೇರಿಗೆ ಬಾರದ ಆಹಾರ ಇಲಾಖೆ ಸಿಬ್ಬಂದಿ. ನಿಗದಿತ ಸಮಯಕ್ಕೆ ಕಚೇರಿ ತೆರೆಯದ ಕಾರಣ ಜನ ಪರದಾಡುವಂತಾಗಿದೆ.
ಬೆಳಗ್ಗೆ 10 ಗಂಟೆಯಿಂದಲೂ ಕಾದು ಕಾದು ಸುಸ್ತಾಗಿರುವ ಜನ. ಪಡಿತರ ಚೀಟಿ, ತಿದ್ದುಪಡಿ ಸೇರಿದಂತೆ ವಿವಿಧ ಕೆಲಸಗಳಿಗೆ ಬಂದಿದ್ದ ಜನರು ಗಂಟೆಗಟ್ಟಲೆ ಕಾಯುವಂತಾಗಿದೆ.
ಆಹಾರ ಇಲಾಖೆ ಕಚೇರಿ ಬಳಿ ಅಧಿಕಾರಿಗಳಿಗೆ ಕಾದಿರುವ 20ಕ್ಕೂ ಹೆಚ್ಚು ಸಾರ್ವಜನಿಕರು.ಕಚೇರಿ ಮುಂದೆ ಉದ್ದದ ಸರತಿ.ವಯಸ್ಸಾದವರು, ದಿನಗೂಲಿ ನೌಕರರು, ಮಹಿಳೆಯರು ಕಚೇರಿ ಮುಂದೆ ಕ್ಯೂನಲ್ಲಿ ನಿಂತು ಸುಸ್ತಾಗಿದ್ದಾರೆ.

ದೇವನಹಳ್ಳಿ ತಾಲ್ಲೂಕು ಕಚೇರಿಯ ಮೂರನೇ ಮಹಡಿಯಲ್ಲಿರುವ ಆಹಾರ ಇಲಾಖೆ ಕಚೇರಿ. ಲಿಫ್ಟ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಜನರಿಗೆ ಮತ್ತಷ್ಟು ತೊಂದರೆ.
ಅಧಿಕಾರಿಗಳು ಬಾರದ ಕಾರಣ ಮೂರನೇ ಮಹಡಿಗೆ ಮೆಟ್ಟಿಲೇರಿ ವೃದ್ಧರು, ಮಹಿಳೆಯರು ಸುಸ್ತು ಆಗಿದ್ದಾರೆ.ಆಹಾರ ಇಲಾಖೆ ತಾಲ್ಲೂಕು ಅಧಿಕಾರಿಗಳಿಗೆ ಜನ ಪ್ರಶ್ನೆ ಮಾಡಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಆರೋಪ.
11.40ರ ಸುಮಾರಿಗೆ ಡಿ ಗ್ರೂಪ್ ನೌಕರನಿಂದ ಇಲಾಖೆ ಕೆಲಸ ಕಾರ್ಯಗಳು ಆರಂಭ. ಅಧಿಕಾರಿಗಳು ಬರುವ ಮೊದಲೇ ಗ್ರೂಪ್-ಡಿ ನೌಕರನೇ ಕಚೇರಿ ಬಾಗಿಲು ತೆರೆದಿದ್ದಾನೆ.
ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಇಂತಹ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹ.ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು ಭವನದಲ್ಲಿ ಘಟನೆನಡೆದಿದೆ.
